ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆ ಹೊಸ ತಿರುವು ಪಡೆದಿದ್ದು, ಕೇರಳದ ಯೂಟ್ಯೂಬರ್ ಮತ್ತು ಸಂಸದರೊಬ್ಬರ ಪಾತ್ರದ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಎಸ್ಐಟಿ ತನಿಖೆ ಚುರುಕುಗೊಂಡಿದ್ದು, ಷಡ್ಯಂತ್ರದ ಹಿಂದಿನ ಮುಖವಾಡಗಳು ಕಳಚುತ್ತಿವೆ.
ದಿನಕ್ಕೊಂದು ಟ್ಚಿಸ್ಟ್.. ಕ್ಷಣಕ್ಕೊಂದು ಮಗ್ಗಲು ಬದಲುಸ್ತಿರೋ ಧರ್ಮಸ್ಥಳ ಷಡ್ಯಂತ್ರ ಕೇಸ್ನ ತನಿಖೆ ನಿರ್ಣಾಯಕ ಘಟ್ಟ ತಲುಪಿದೆ. ಷಡ್ಯಂತ್ರ ಗ್ಯಾಂಗ್ನ ಮುಖವಾಡಗಳು ಕಳಚಿ ಬೀಳ್ತಿದ್ದಂತೆ ತನಿಖೆಯ ವೇಗ ಹೆಚ್ಚಿಸಿರೋ ಎಸ್ಐಟಿ, ಬುರುಡೆ ಗ್ಯಾಂಗ್ನ ಬೆವರಿಳಿಸುತ್ತಿದೆ.