Aug 19, 2023, 6:44 PM IST
ಬೆಂಗಳೂರು (ಆ.19): ಉದ್ಯಾನನಗರಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಉದ್ಯಾನ ಸೃಷ್ಟಿಸಲಾಗಿದೆ. ಈ ಮೂಲಕ ಏಷ್ಯಾದಲ್ಲೇ ಮೊದಲ ಬಾರಿಗೆ 'ಉದ್ಯಾನದಲ್ಲಿ ಟರ್ಮಿನಲ್' ಎನ್ನುವ ಥೀಮ್‌ನಡಿ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಮುದ ನೀಡುತ್ತಿದೆ. ಟರ್ಮಿನಲ್ 2ಗೆ ಯಾರೇ ಬಂದರೂ ನಾವು ಹೊಸ ಉದ್ಯಾನಕ್ಕೆ ಅಂದರೆ ಬೇರೆನೆ ಪ್ರಪಂಚಕ್ಕೆ ಬಂದಿದ್ದೀವಿ ಎಂದು ಹೇಳುತ್ತಿದ್ದಾರೆ. ಇಷ್ಟು ವಿಭಿನ್ನವಾಗಿರುವ ಟರ್ಮಿನಲ್ 2 ಬಗ್ಗೆ ಎಲ್ಲರೂ ಮಾತನಾಡುತ್ತಿದ್ದು, ದೇಶ ವಿದೇಶಗಳಲ್ಲಿ ಟರ್ಮಿನಲ್ 2 ಬಗ್ಗೆ ಚರ್ಚೆ ನಡೆಯುತ್ತಿದೆ. ಏಷ್ಯಾದಲ್ಲಿಯೇ ಇಂತಹ ಅದ್ಭುತ ಟರ್ಮಿನಲ್ 2 ಕಂಡಿಲ್ಲ ಎಂದು ಬಹಳಷ್ಟು ಜನ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಟರ್ಮಿನಲ್ 2 ಯಾಕೆ ಇಷ್ಟು ಮುಖ್ಯ ಎಂಬುದನ್ನು ತಿಳಿಯಲು ಈ ವಿಡಿಯೋವನ್ನು ವೀಕ್ಷಿಸಿ.