ಅಪಾಯದ ಮಟ್ಟ ಮೀರಿದೆ ಘಟಪ್ರಭಾ; ಪ್ರವಾಹದ ಮಧ್ಯೆ ಪಲ್ಲಕ್ಕಿ ಕೊಂಡೊಯ್ದ ಗ್ರಾಮಸ್ಥರು

Aug 17, 2020, 12:31 PM IST

ಬೆಂಗಳೂರು (ಆ. 17): ಬಾಗಲಕೋಟೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದ ನೀರನ್ನೂ ಲೆಕ್ಕಿಸದೇ ಮುಧೋಳ ತಾಲೂಕಿನ ಜಂಬಗಿ, ಕೆ ಡಿ ಗ್ರಾಮದಿಂದ ಗಲಗಲಿ ಗ್ರಾಮಕ್ಕೆ ತೆಪ್ಪದಲ್ಲಿ ದೇವರ ಪಲ್ಲಕ್ಕಿಯನ್ನು ಹೊತ್ತೊಯ್ದಿದ್ದಾರೆ. ಶ್ರಾವಣ ಮಾಸದ ಕಡೆಯ ಶನಿವಾರವಾದ್ದರಿಂದ ಗ್ರಾಮದೇವತೆ ಲಕ್ಕಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಘಟಪ್ರಭಾ ನದಿ ತಂಬಿ ಹರಿಯುತ್ತಿದ್ದು, ಅಪಾಯವನ್ನು ಲೆಕ್ಕಿಸದೇ ಗ್ರಾಮಸ್ಥರು ಸಾಹಸಕ್ಕೆ ಕೈ ಹಾಕಿದ್ದಾರೆ. 

ಕುಂದಾನಗರಿಯಲ್ಲಿ ಭಾರೀ ಮಳೆ: ಮಂಡೋಳಿ ಸಂಪರ್ಕಿಸುವ ಸೇತುವೆ ಜಲಾವೃತ