Aug 25, 2021, 2:25 PM IST
ಬೆಂಗಳೂರು (ಆ.25): ನಟ ಕೋಮಲ್ ವಿರುದ್ಧ ಸ್ವೆಟರ್ ಸ್ಕ್ಯಾಮ್ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಇದಕ್ಕೆ ಬಿಗ್ ಟ್ವಿಸ್ಟ್ ದೊರಕಿದ್ದು 1 ಕೋಟಿ 72 ಲಕ್ಷ ನುಂಗಿದರಾ ಕೋಮಲ್ ಎನ್ನುವ ಪ್ರಶ್ನೆ ಮೂಡಿದ್ದು, ಈ ಬಗ್ಗೆ ಸಂಧಾನಕ್ಕೆ ಜಗ್ಗೇಶ್ ಯತ್ನಿಸಿದ್ದಾರೆ. ಅಧಿಕಾರಿ ಮೂಲಕ ದೂರುದಾರರ ಮೇಲೆ ನಟ ಜಗ್ಗೇಶ್ ರಾಜಕೀಯ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.
ಸ್ವೆಟರ್ ಗೋಲ್‌ಮಾಲ್: ಹಂಚದೇ ಬಿಬಿಎಂಪಿಯಿಂದ ದುಡ್ಡು ಪಡೆದ್ರಾ ನಟ ಕೋಮಲ್?
ಹಗರಣ ಬಯಲಾಗಿದ್ದಕ್ಕೆ ನಟ ಜಗ್ಗೇಶ್ ಸಿಟ್ಟಾಗಿ ಪರೋಕ್ಷವಾಗಿ ಕಿಡಿ ಕಾರಿದ್ದು, ಆನೆ ರಾಜಮಾರ್ಗದಲ್ಲಿ ನಡೆಯುವಾಗ ನಾಯಿಗಳು ಬೊಗಳೋದು ಸಹಜ. ಆಕಸ್ಮಿಕ ಸಿಟ್ಟಿಗೆ ಇಳಿದಾಗ ನಮ್ಮದು ನಾಯಿ ಸ್ಥಾನ ಆಗುತ್ತದೆ ಎಂದು ಜಗ್ಗೇಶ್ ಹೇಳಿದ್ದಾರೆ.