ಅಕ್ಷರ ಲೋಕದ ಮಾಂತ್ರಿಕ, ಹಿರಿಯ ಪತ್ರಕರ್ತ, ಲೇಖಕ ರವಿ ಬೆಳೆಗೆರೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಬಾರದ ಲೋಕಕ್ಕೆ ರವಿ ತೆರಳಿದ್ದಾರೆ.
ಬೆಂಗಳೂರು (ನ. 13): ಅಕ್ಷರ ಲೋಕದ ಮಾಂತ್ರಿಕ, ಹಿರಿಯ ಪತ್ರಕರ್ತ, ಲೇಖಕ ರವಿ ಬೆಳೆಗೆರೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಬಾರದ ಲೋಕಕ್ಕೆ ರವಿ ತೆರಳಿದ್ದಾರೆ.
'1992 ರಲ್ಲಿ ನಾನು, ರವಿ ಒಟ್ಟಿಗೆ ಕನ್ನಡ ಪ್ರಭದಲ್ಲಿ ಸಬ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದೆವು. ಆ ನಂತರ ಹಾಯ್ ಬೆಂಗಳೂರು ಶುರು ಮಾಡಿದ. 'ಪ್ರಾರ್ಥನಾ' ಶಾಲೆ ಆರಂಭಿಸಿದ. ಬರಹ, ಸಿನಿಮಾ, ಕಲಾವಿದ... ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ. ಯಾವತ್ತೂ ತನ್ನನ್ನು ತಾನು ಬಿಟ್ಟುಕೊಡುತ್ತಿರಲಿಲ್ಲ. ಭಯಂಕಾರ ಛಲಗಾರನಾಗಿದ್ದ. ಯಾವ ಕೆಲಸವೂ ತನ್ನಿಂದ ಆಗಲ್ಲ ಎಂದು ಬಿಡುತ್ತಿರಲಿಲ್ಲ. ಅವನ ಜೀವನ ಒಂದು ಸಿನಿಮಾವಾಗಬೇಕು' ಎಂದು ಸುವರ್ಣ ನ್ಯೂಸ್ ಡಿಜಿಟಲ್ ಹೆಡ್ ಎಸ್.ಕೆ ಶ್ಯಾಮಸುಂದರ್ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ.