
ಅದು ಸಖತ್ ಟ್ರೋಲ್ ಮತ್ತು ವೈರಲ್ ಆದ ಸಂಸಾರ... ಮೂರು ಮಕ್ಕಳ ತಾಯಿ ಬಾಯ್ಫ್ರೆಂಡ್ ಜೊತೆ ಹೋಗಿಬಿಟ್ಟಳು ಅಂತ ಗಂಡ ಮಾದ್ಯಮದವರನ್ನೆಲ್ಲಾ ಕರೆದು ಇನ್ನಿಲ್ಲದಂತೆ ಕಣ್ಣೀರು ಹಾಕಿದ್ದ.. ಫ್ಲೇವರು.. ಚಿನ್ನು..
ಅದು ಸಖತ್ ಟ್ರೋಲ್ ಮತ್ತು ವೈರಲ್ ಆದ ಸಂಸಾರ... ಮೂರು ಮಕ್ಕಳ ತಾಯಿ ಬಾಯ್ಫ್ರೆಂಡ್ ಜೊತೆ ಹೋಗಿಬಿಟ್ಟಳು ಅಂತ ಗಂಡ ಮಾದ್ಯಮದವರನ್ನೆಲ್ಲಾ ಕರೆದು ಇನ್ನಿಲ್ಲದಂತೆ ಕಣ್ಣೀರು ಹಾಕಿದ್ದ.. ಫ್ಲೇವರು.. ಚಿನ್ನು.. ಬಂಗಾರಿ ಅಂತೆಲ್ಲಾ ಕ್ಯಾಮರಾ ಮಂದು ಗೋಳಾಡಿದ್ದ.. ಆ ಸಂಸಾರದ ಗಲಾಟೆ ರಾಜ್ಯ ಮಟ್ಟದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.. ಯಸ್.. ನಾವು ಮಾತನ್ನಾಡುತ್ತಿರೋದು ಮಂಜು ತ್ತು ಲೀಲಾ ಫ್ಯಾಮಿಲಿ ಮ್ಯಾಟರ್ ಬಗ್ಗೆ.. ಆವತ್ತು ದೊಡ್ಡ ಸುದ್ದಿ ಮಾಡಿದ್ದ ಗಂಡ ಹೆಂಡತಿ ಮತ್ತು ಬಾಯ್ಫ್ರೆಂಡ್ನ ಗಲಾಟೆ ಈಗ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ.
ಯಾವುದೇ ಕಾರಣಕ್ಕೂ ನಾನು ಗಂಡನ ಜೊತೆ ಹೋಗಲ್ಲ ಅಂದಿದ್ದ ಹೆಂಡತಿ ಇವತ್ತು ಮರಳಿ ಗಂಡನ ಮಡಿಲು ಸೇರಿದ್ದಾಳೆ.. ಅಷ್ಟಕ್ಕೂ ಲೀಲಾಗೆ ಈಗ ಜ್ಞಾನೋದಯ ಆಗಲು ಕಾರಣವೇನು..? ಇವರಿಬ್ಬರ ನಡುವೆ ಆವತ್ತೇನಾಗಿತ್ತು..? ಇವತ್ತೇನಾಯ್ತು..? ಒಂದು ಗಲಾಟೆ ಸಂಸಾರದ ಕಥೆಯೇ ಇವತ್ತಿನ ಎಫ್ಐಆರ್. ಎಂಥ ವಿಚಿತ್ರ ಸಂಸಾರ ರೀ ಇದು.. ಆವತ್ತು ಹೆಂಡತಿಯ ಬಾಯ್ಫ್ರೆಂಡ್ಗೆ ಹಲ್ಲೆ ಮಾಡಿ ಜೈಲು ಸೇರಿಬಿಟ್ಟ ಮಂಜು. ನಂತರ ಜಾಮೀನಿನ ಮೇಲೆ ಹೊರ ಬಂದ.. ಆದ್ರೆ ಇಷ್ಟೆಲ್ಲಾ ಆಗ 2-3 ತಿಂಗಳಾಗಿವೆ.. ಇವತ್ತು ಗಂಡ ಹೆಂಡತಿ ಇಬ್ಬರೂ ಪ್ರತ್ಯಕ್ಷರಾಗಿ ನಾವು ಇನ್ಮುಂದೆ ಒಂದಾಗಿ ಬಾಳ್ತೀವಿ ಅಂತಿದ್ದಾರೆ.. ಹಾಗಾದ್ರೆ ಈ 2-3 ತಿಂಗಳಲ್ಲಿ ಏನಾಯ್ತು..?
ಈ ಇಬ್ಬರೂ ಒಂದಾಗಿ ಬಾಳಲು ಕಾರಣವೇನು. ನಾಲ್ಕು ತಿಂಗಳ ಹಿಂದೆ ಸಂಸಾರದ ಗಲಾಟೆಯನ್ನ ಬೀದಿ ರಂಪಾಟ ಮಾಡಿಕೊಂಡಿದ್ದ ಜೋಡಿ ಇವತ್ತು ಐಸ್ ಕ್ರೀಮ್ ಪಾರ್ಲರ್ ಎದುರು ಪ್ರತ್ಯಕ್ಷವಾಗಿತ್ತು.. ಇನ್ಮುಂದೆ ನಾವಿಬ್ಬರೂ ಒಂದೇ ಅಂತ ಹೆಳಿಕೊಂಡು ಒಂದೇ ಐಸ್ಕ್ರೀಮ್ ಅನ್ನ ಶೇರ್ ಮಾಡಿಕೊಂಡ್ರು.. ಅಷ್ಟೇ ಅಲ್ಲ ಎಲ್ಲಾ ಮಕ್ಕಳಿಗೆ ಅಂತ ಹೇಳಿ ಒಂದೇ ಆಟೋದಲ್ಲಿ ಕೂತು ಮನೆಕಡೆ ಹೊರಟರು.. ಇತ್ತ ದೂರವೇ ನಿಂತು ಹಳೇ ಬಾಯ್ಫ್ರೆಂಡ್ ಇಬ್ಬರಿಗೂ ಆಲ್ ದ ಬೆಸ್ಟ್ ಹೇಳಿ ಕಳಿಸಿಕೊಟ್ಟ. ಕೊನೆಗೂ ಮಂಜನ ಸಂಸಾರ ಸರಿಯಾಗಿದೆ.. ಲೀಲಾ ಮಕ್ಕಳ ಮುಖ ನೋಡಿಕೊಂಡು ವಾಪಸ್ ಬಂದಿದ್ದಾಳೆ.. ಇನ್ನಾದ್ರೂ ಈ ಜೋಡಿ ಒಟ್ಟಿಗೆ ನೂರು ಕಾಲ ಖುಷಿ ಖುಷಿಯಿಂದ ಬಾಳಲಿ.