ವಿಜಯೇಂದ್ರ ಒಳ್ಳೆಯ ಜನನಾಯಕ ಆಗುವ ಲಕ್ಷಣ ಹೊಂದಿದ್ದಾರೆ. ಸಿಎಂ ಮಗ ಎನ್ನುವುದಕ್ಕಿಂತ ಜನರ ನಾಡಿಮಿಡಿತ ಅರಿತಿದ್ದಾರೆ ಎಂದು ಸುತ್ತೂರು ಶ್ರೀ ಬ್ಯಾಟಿಂಗ್ ಮಾಡಿದ್ದಾರೆ.
ಬೆಂಗಳೂರು (ಫೆ. 14): ರಾಜ್ಯದಲ್ಲಿ ಮೀಸಲಾತಿ ಹೊರಾಟ ಹೆಚ್ಚಾಗಿದೆ. 'ಸೌಲಭ್ಯ ವಂಚಿತರಿಗೆ ಸೌಕರ್ಯಗಳನ್ನು ನೀಡಲೇಬೇಕು. ಸಮುದಾಯದ ನಾಲ್ಕಾರು ಜನಕ್ಕೆ ಒಳ್ಳೆಯ ಸ್ಥಾನಮಾನ ಸಿಕ್ಕಿದೆ ಅಂದಾಕ್ಷಣ ಇಡೀ ಸಮುದಾಯ ಅನುಕೂಲವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿ ಸಮುದಾಯದಲ್ಲೂ ಬಡವರಿದ್ದಾರೆ. ಯಾರೋ ಒಬ್ಬರಿಗೆ ಮೀಸಲಾತಿ ಕೊಡುವ ಬದಲು ಎಲ್ಲಾ ಸಮುದಾಯಗಳಿಗೂ ಸಮಾನ ಆದ್ಯತೆ ಕೊಡಬೇಕು. ಇದು ಸರ್ಕಾರದ ಹೊಣೆಗಾರಿಕೆ ಹಾಗೂ ಜವಾಬ್ದಾರಿಯೂ ಹೌದು ಎಂದು ಸುತ್ತೂರು ಶ್ರೀಗಳು ಹೇಳಿದ್ದಾರೆ.
ಇನ್ನು ವಿಜಯೇಂದ್ರ ಒಳ್ಳೆಯ ಜನನಾಯಕ ಆಗುವ ಲಕ್ಷಣ ಹೊಂದಿದ್ದಾರೆ. ಸಿಎಂ ಮಗ ಎನ್ನುವುದಕ್ಕಿಂತ ಜನರ ನಾಡಿಮಿಡಿತ ಅರಿತಿದ್ದಾರೆ ಎಂದು ಬ್ಯಾಟಿಂಗ್ ಮಾಡಿದ್ದಾರೆ.