ಹಾನಗಲ್, ಸಿಂಧಗಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿದೆ. ಸಿಂದಗಿ ಕ್ಷೇತ್ರಕ್ಕೆ ಅಶೋಕ್ ಮನಗೂಳಿ ಮತ್ತು ಹಾನಗಲ್ ಕ್ಷೇತ್ರಕ್ಕೆ ಹಾಲಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಅವರ ಹೆಸರನ್ನು ಪ್ರಕಟಿಸಿದೆ.
ಬೆಂಗಳೂರು (ಅ. 06): ಹಾನಗಲ್, ಸಿಂಧಗಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿದೆ. ಸಿಂದಗಿ ಕ್ಷೇತ್ರಕ್ಕೆ ಅಶೋಕ್ ಮನಗೂಳಿ ಮತ್ತು ಹಾನಗಲ್ ಕ್ಷೇತ್ರಕ್ಕೆ ಹಾಲಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಅವರ ಹೆಸರನ್ನು ಪ್ರಕಟಿಸಿದೆ.
ಸಿಂಧಗಿಯಲ್ಲಿ ಎಂ ಸಿ ಮನಗೂಳಿ ಪರ ಅನುಕಂಪದ ಅಲೆಯಿದೆ. ಅನುಕಂಪದ ಅಲೆ ಅಶೋಕ್ ಮನಗೂಳಿ ಪರ ಮತಗಳಾಗುವ ಸಾಧ್ಯತೆ ಇದೆ. ಇನ್ನು ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿದಿರುವುದು ಮತಬ್ಯಾಂಕ್ ವಿಭಜನೆಯಾಗುವ ಆತಂಕವೂ ಇದೆ.
ಸಿಂಧಗಿಯಲ್ಲಿ ಮರಾಠಿ ಸಮುದಾಯದ ಶ್ರೀನಿವಾಸ್ ಮಾನೆಗೆ ಕ್ಷೇತ್ರದ ಮರಾಠಿಗರ ಮತ ಬೀಳುವ ಸಾಧ್ಯತೆ ಇದೆ. ಕಾಂಗ್ರೆಸ್ ಮತಬ್ಯಾಂಕ್ ಅಹಿಂದ ಮತ ಸೆಳೆದರೆ ಗೆಲುವು ನಿಶ್ಚಿತ ಎನ್ನಲಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಪರ ಉದಾಸಿ ಅವರ ನಿಧನದ ಅನುಕಂಪ ಇದೆ. ಇದು ಮೈನಸ್ ಆಗುವ ಸಾಧ್ಯತೆ ಇದೆ.