ಜಿಎಸ್‌ಟಿ ವ್ಯಾಪ್ತಿಗೆ ತೈಲೋದ್ಯಮ ತರಲು ರಾಜ್ಯಗಳ ವಿರೋಧ, ಯಾಕೆ..?

Sep 17, 2021, 2:38 PM IST

ಬೆಂಗಳೂರು (ಸೆ. 17): ತೈಲೋದ್ಯಮವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಒಂದು ವೇಳೆ ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಶೇ. 50 ರಷ್ಟು ತೆರಿಗೆ ಕಡಿತ ಸಾಧ್ಯತೆ ಇದೆ. ಹೀಗಾಗಿ ಬೇಡ ಎನ್ನುತ್ತಿವೆ ರಾಜ್ಯಗಳು. ದಕ್ಷಿಣದ ರಾಜ್ಯಗಳು ಹೆಚ್ಚು ತೆರಿಗೆ ಪಾಲು ಹೊಂದಿವೆ. 

ಮೈಸೂರಿನಲ್ಲಿ ದೇಗುಲ ತೆರವು ವಿರುದ್ಧ ಆಕ್ರೋಶ, ಸರ್ಕಾರಕ್ಕೆ ಹಿಂಜಾವೇ ಎಚ್ಚರಿಕೆ

ಪೆಟ್ರೋಲ್‌, ಡೀಸೆಲ್‌ ದರಗಳು ಗಗನಮುಖಿ ಆಗಿರುವ ಹಿನ್ನೆಲೆಯಲ್ಲಿ ತೈಲೋತ್ಪನ್ನಗಳನ್ನು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಅಡಿ ತರುವ ಮಹತ್ವದ ಪ್ರಸ್ತಾಪವು ಜಿಎಸ್‌ಟಿ ಮಂಡಳಿಯ ಮುಂದೆ ಬಂದಿದೆ.  ಜಿಎಸ್‌ಟಿಯ ಅಡಿಯಲ್ಲಿ ಬಂದಿದ್ದೇ ಆದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ 30 ರು.ವರೆಗೂ ಇಳಿಕೆ ಆಗುವ ಕಾರಣ, ಸಭೆಯ ನಿರ್ಧಾರದ ಭಾರೀ ಕುತೂಹಲ ಕೆರಳಿಸಿದೆ. ಆದರೆ ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಕೇಂದ್ರ ಮತ್ತು ರಾಜ್ಯಗಳಿಗೆ ವಾರ್ಷಿಕ 4 ಲಕ್ಷ ಕೋಟಿ ರು.ನಷ್ಟವಾಗುತ್ತದೆ. ಹೀಗಾಗಿ ಉಭಯ ಬಣಗಳು ಈ ಬಗ್ಗೆ ಒಪ್ಪಿಕೊಳ್ಳುವ ಬಗ್ಗೆ ಅನುಮಾನಗಳಿವೆ.