News Hour: ರಾಜ್ಯ ಕಾಂಗ್ರೆಸ್‌ನಲ್ಲಿ ಒಂದು ಊಟದ ಕಥೆ, ಡಿನ್ನರ್‌ ಪಾರ್ಟಿಗೆ ಬಂಡೆಯಾದ ಡಿಕೆಶಿ!

Jan 8, 2025, 11:09 PM IST

ಬೆಂಗಳೂರು (ಜ.8): ರಾಜ್ಯ ಕಾಂಗ್ರೆಸ್‌ನಲ್ಲಿ ಡಿನ್ನರ್‌ ಪಾರ್ಟಿ ಫೈಟ್‌ ಜೋರಾಗಿದೆ. ದೆಹಲಿಯಿಂದಲೇ ಡಿನ್ನರ್‌ ಪಾರ್ಟಿಯನ್ನು ಕ್ಯಾನ್ಸಲ್‌ ಮಾಡಿದ್ದಕ್ಕೆ ಡಿಕೆ ಶಿವಕುಮಾರ್‌ ವಿರುದ್ಧ ಕಾಂಗ್ರೆಸ್‌ ನಾಯಕರೇ ಕಿಡಿಕಿಡಿಯಾಗಿದ್ದಾರೆ.

ಇದಕ್ಕಾಗಿ ಡಿಕೆಶಿ ವಿರುದ್ಧ ಸಿದ್ದು ಬಣ  ನೇರಾನೇರ ಸಮರಕ್ಕಿಳಿದಿದೆ.  ನಮ್ಮ ಶಕ್ತಿ ತೋರಿಸ್ತೀವಿ ಎಂದು ಪರಮೇಶ್ವರ್ ಸವಾಲ್  ಎಸೆದಿದ್ದಾರೆ. ಇದೆಲ್ಲಾ ಬಹಳ ನಡೆಯಲ್ಲ ಎಂದು ರಾಜಣ್ಣ ರಣಕಹಳೆ ಊದಿದ್ದಾರೆ.

ತಿರುಪತಿಯಲ್ಲಿ ಭಾರೀ ಕಾಲ್ತುಳಿತ, 6 ಮಂದಿ ದುರ್ಮರಣ, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ

ಮಹತ್ವದ ವಿಚಾರದಲ್ಲಿ ಎರಡು ದಶಕದ ಬಳಿಕ ಕರ್ನಾಟಕ ನಕ್ಸಲ್​ ಮುಕ್ತವಾಗಿದೆ. ವಿಕ್ರಂಗೌಡ ಎನ್​ಕೌಂಟರ್ ಬಳಿಕ  ಕೆಂಪು ಉಗ್ರರು ಮುಖ್ಯವಾಹಿನಿಗೆ ಬಂದಿದ್ದಾರೆ. ಸಿದ್ದರಾಮಯ್ಯ ಎದುರೇ 6 ನಕ್ಸಲರು ಸರೆಂಡರ್ ಆಗಿದ್ದಾರೆ.