ಜಾಮಿಯಾ ಮಸೀದಿ ವಿವಾದ: ಮಸೀದಿಯೊಳಗೆ ಗಣಪತಿ,ಲಕ್ಷ್ಮೀ ಹೋಲಿಕೆಯ ಕೆತ್ತನೆ ಪತ್ತೆ

Jun 3, 2022, 3:23 PM IST

ಮಂಡ್ಯ (ಜೂ.03):  ಮೂಡಲಬಾಗಿಲು ಶ್ರೀಆಂಜನೇಯಸ್ವಾಮಿ ದೇಗುಲವನ್ನು ಜಾಮಿಯಾ ಮಸೀದಿಯಾಗಿ (Jmia Masjid) ರೂಪಾಂತರಿಸಲಾಗಿದೆ ಎಂಬ ವಾದ ಜೋರಾಗಿ ಕೇಳಿ ಬರುತ್ತಿದೆ. 1786 ರಿಂದ 1790ರ ಟಿಪ್ಪು ಆಡಳಿತ ಅವಧಿಯಲ್ಲಿ ದೇವಾಲಯದ ಮೇಲೆ ಮಸೀದಿ ನಿರ್ಮಾಣ ಮಾಡಲಾಗಿದೆ. ಉದ್ದೇಶ ಪೂರ್ವಕವಾಗಿ ಧಾರ್ಮಿಕ ದ್ವೇಷದಿಂದ ದೇವಾಲಯಕ್ಕೆ ಹಾನಿ ಉಂಟುಮಾಡಲಾಗಿದೆ. ಧಾರ್ಮಿಕ ಘಾಸಿಗೊಳಿಸುವಿಕೆಗೆ ಅವಕಾಶ ಮತ್ತು ಮುಂದುವರೆಸುವುದು ಹಿಂದೂಗಳ ಭಾವನೆಗೆ ಧಕ್ಕೆ ತಂದಂತಾಗಿದೆ ಎಂಬ ವಾದ ಶುರುವಾಗಿದೆ.  ಈ ವಾದಕ್ಕೆ ಇನ್ನಷ್ಟು ಪುರಾವೆಗಳು ಸಿಕ್ಕಿವೆ. 

Kashmir Killings: ಕಣಿವೆಯಲ್ಲಿ ಹರಿಯುತ್ತಿದೆ ಹಿಂದೂಗಳ ರಕ್ತದ ಕೋಡಿ: ಕಾಶ್ಮೀರ್ ಫೈಲ್ಸ್ ರೀ ಓಪನ್..?

ಮಸೀದಿಯೊಳಗೆ ಗಣಪತಿ ಮತ್ತು ಲಕ್ಷ್ಮೀ ಹೋಲಿಕೆಯ ಕೆತ್ತನೆ, ಚಕ್ರ ಕಮಲಗಳಿವೆ. ಮಸೀದಿ ಸಂಪೂರ್ಣ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದೆ. ಈಶಾನ್ಯ ಮೂಲೆಯಲ್ಲಿ ಕಲ್ಯಾಣಿ ಇದೆ. ಮಸೀದಿಯೊಳಗಿನ ಎಕ್ಸ್‌ಕ್ಲೂಸಿವ್ ದೃಶ್ಯ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.