ರಾಜಕಾರಣಿಗಳಿಂದ ದೂರವಿರುವ ಶೃಂಗೇರಿ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಇಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ್ದಾರೆ. ಡಿಕೆ ಶಿವಕುಮಾರ್ ನಿವಾಸದಲ್ಲಿನ ಸರಸ್ವತಿ ಪೂಜೆಗೆ ಆಗಮಿಸಿದ ಸ್ವಾಮಿಗಳು ಡಿಕೆಶಿ ದಂಪತಿಗಳಿಂದ ಗುರುವಂದನೆ ಸ್ವೀಕರಿಸಿದರು. ಸರಸ್ವತಿ ಪೂಜೆ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಶ್ರೀಗಳು ನಮ್ಮ ಮನೆಗೆ ಬಂದಿರುವುದು ಸೌಭಾಗ್ಯ. ಅವರಿಗೆ ಗುರವಂದನೆ ಮಾಡುವ ಅವಕಾಶ ನಮ್ಮ ಪಾಲಿಗೆ ಒದಗಿಬಂದಿತು ಅತೀವ ಸಂತಸ ತಂದಿದೆ ಎಂದು ಡಿಕೆಶಿ ಹೇಳಿದ್ದಾರೆ.