Oct 1, 2021, 1:45 PM IST
ಬೆಂಗಳೂರು (ಅ. 01): ಯುವ ನಟಿ, ಕೊಡಗಿನ ಸೌಜನ್ಯ ಅಲಿಯಾಸ್ ಸವಿ ಮಾದಪ್ಪ (25) ಡೆತ್‌ನೋಟ್ ಬರೆದಿಟ್ಟು ಬೆಂಗಳೂರಿನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾವಿನ ಬಗ್ಗೆ ತಂದೆ ಮಾದಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರೀತಿಗೆ ಅಪ್ಪನ ವಿರೋಧ; ನೊಂದು ಆತ್ಮಹತ್ಯೆಗೆ ಶರಣಾದಳಾ ಸೌಜನ್ಯ..?
'ನೇಣು ಬಿಗಿದ ಸ್ಥಿತಿಯಲ್ಲಿ ಮಗಳು ಪತ್ತೆಯಾಗಿಲ್ಲ. ಆತ್ಮಹತ್ಯೆ ಬಳಿಕ ಮಹೇಶ್ ಒಬ್ಬನೇ ಮೃತದೇಹ ಇಳಿಸಿದ್ದಾನೆ. ನಟ ವಿವೇಕ್ ಹಾಗೂ ಅವರ ಪಿಎ ಮಹೇಶ್ ಮೇಲೆ ಅನುಮಾನವಿದೆ' ಎಂದು ತಂದೆ ಮಾದಪ್ಪ ಹೇಳಿದ್ದಾರೆ. ಕುಂಬಳಗೋಡಿನಲ್ಲಿರುವ ಸೌಜನ್ಯ ಫ್ಲಾಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.