Oct 26, 2021, 11:25 AM IST
ಬೆಂಗಳೂರು (ಅ. 26): ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಪುಂಡಾಟ ಪ್ರಕರಣ ನಡೆದು 4 ದಿನಗಳಾದರೂ ಆರೋಪಿಗಳ ಬಂಧನವಾಗಿಲ್ಲ. ಸ್ನೇಹಿತ್ ಬಂಧಿಸದಂತೆ ಪ್ರಭಾವಿಗಳು ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ಧಾರೆ ಎನ್ನಲಾಗಿತ್ತು.
ಸೌಂದರ್ಯ ಜಗದೀಶ್ ಪುತ್ರನ ಪುಂಡಾಟ ಕೇಸ್: ಪೊಲೀಸರಿಗೆ ಕಮಿಷನರ್ ಖಡಕ್ ಸೂಚನೆ
ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಕೂಡಲೇ ಕ್ರಮ ಕೈಗೊಳ್ಳಿ ಎಂದು ಕಮಿಷನರ್ ಕಮಲ್ ಪಂಥ್ ಆದೇಶಿಸಿದ್ದರು. ಇದೀಗ ಪೊಲೀಸರು ಅಲರ್ಟ್ ಆಗಿದ್ದು ತನಿಖೆ ಚುರುಕುಗೊಂಡಿದೆ. ಬಂಧನ ಭೀತಿ ಹೆಚ್ಚಾಗುತ್ತಿದ್ದಂತೆ ಸ್ನೇಹಿತ್ ನಿರೀಕ್ಷಣಾ ಜಾಮೀನಿಗೆ ಮುಂದಾಗಿದ್ದಾರೆ.