ಕೊರೋನಾ ಕಂಟ್ರೋಲ್ ಮಾಡಲು ಹೊಸ ಪ್ಲಾನ್ ಮಾಡಿದ ಬಿಬಿಎಂಪಿ..!

Jul 28, 2020, 5:46 PM IST

ಬೆಂಗಳೂರು(ಜು.28): ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ  ತಾಪಮಾನ ಪರೀಕ್ಷೆ, ಸ್ಯಾನಿಟೈಸಿಂಗ್, ಮಾಸ್ಕ್ ಕಡ್ಡಾಯ, ಹೀಗೆ ಹಲವು ಕ್ರಮಗಳನ್ನು ಕೈಗೊಂಡರೂ ಬಿಬಿಎಂಪಿ ಅದರಲ್ಲಿ ನಿರೀಕ್ಷಿತ ಯಶಸ್ಸು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ಮತ್ತೊಂದು ವಿನೂತನ ಯೋಜನೆಯನ್ನು ಬಿಬಿಎಂಪಿ ಹಾಕಿಕೊಂಡಿದೆ.

ಹೌದು, ಕೊರೋನಾ ವೈರಸ್ ಪತ್ತೆಗೆ ಇದೀಗ ಬಿಬಿಎಂಪಿ ಹೊಸದೊಂದ ಪ್ಲಾನ್ ರೂಪಿಸಿದೆ. ಜನರ ವಾಸನೆ ಗ್ರಹಿಕೆಯ ಟೆಸ್ಟ್ ನಡೆಸಲು ಬಿಬಿಎಂಪಿ ಮುಂದಾಗಿದೆ. ಮಾಲ್, ಕಚೇರಿಗಳ ಬಳಿ ವಾಸನೆ ಗ್ರಹಿಕೆ ಕಾರ್ಡ್‌ ಇಡಲು ಬಿಬಿಎಂಪಿ ಚಿಂತನೆ ನಡೆಸಿದೆ.

ಭಾರತದ ನೆರವಿಗೆ ಬಂದ ಫ್ರಾನ್ಸ್, ಟ್ರೋಲಿಗರಿಗೆ ಅಮಿತಾಬ್ ಕ್ಲಾಸ್; ಜು.28ರ ಟಾಪ್ 10 ಸುದ್ದಿ!

ಸೋಂಕಿಗೆ ತುತ್ತಾದವರು ವಾಸನೆಯನ್ನು ಗ್ರಹಿಸುವಲ್ಲಿ ಯಡವುತ್ತಾರೆ ಎನ್ನಲಾಗಿದೆ. ಹೀಗಾಗಿ ಆರೆಂಜ್, ಮ್ಯಾಂಗೋ ಸೇರಿದಂತೆ ಹಲವು ಮಾದರಿಯ ವಾಸನೆಯ ಕಾರ್ಡ್‌ಗಳನ್ನು ಇರಿಸಲು ಬಿಬಿಎಂಪಿ ಯೋಚಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.