ಸರಳ ದಸರಾ ಇದೇ ಮೊದಲೇನಲ್ಲ, ಈ ಹಿಂದೆಯೂ ಇಂತಹ ಸಂದರ್ಭಗಳಲ್ಲಿ ಆಚರಿಸಲಾಗಿತ್ತು

Oct 26, 2020, 11:25 AM IST

ಮೈಸೂರು (ಅ. 26): ಮೈಸೂರು ದಸರಾ ಎಷ್ಟೊಂದು ಸುಂದರ... ಹೌದು. ದಸರಾ ಅಂದಾಕ್ಷಣ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ಆದರೆ ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ಸರಳ ದಸರಾ ಆಚರಿಸಲಾಗುತ್ತಿದೆ. ಸಂಭ್ರಮಕ್ಕೇನೂ ಕೊರತೆ ಇಲ್ಲ. ಆದರೆ ಸರಳ ದಸರಾ ಆಚರಿಸಲಾಗುತ್ತಿದೆ. 

ಜಂಬೂ ಸವಾರಿಯಲ್ಲಿ 2 ಸ್ಥಬ್ಧ ಚಿತ್ರಗಳಿಗೆ ಮಾತ್ರ ಅವಕಾಶ

410 ವರ್ಷಗಳ ಇತಿಹಾಸದಲ್ಲಿ12 ನೇ ಬಾರಿ ಸರಳ ದಸರಾ ಆಚರಿಸಲಾಗಿದೆ. ಇದು 13 ನೇ ಬಾರಿ ಸರಳ ದಸರಾ ಆಚರಿಸಲಾಗುತ್ತಿದೆ.  ಬರಗಾಲ, ರಾಜವಂಶಸ್ಥರ ನಿಧನದಿಂದ ಸರಳವಾಗಿ ಆಚರಿಸಲಾಗಿತ್ತು. 1893. 1972, 1973 ರಲ್ಲಿ ಭೀಕರ ಬರಗಾಲ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಗಿತ್ತು. 2000 ದಲ್ಲಿ ಅಣ್ಣಾವ್ರ ಅಪಹರಣ ಹಿನ್ನಲೆಯಲ್ಲಿ ಸರಳವಾಗಿ ಅಚರಿಸಲಾಗಿತ್ತು. ಇದು 13 ನೇ ಬಾರಿ ಕೊರೊನಾ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ.