ಆಯುಧಗಳಿಗೂ ಪೂಜೆ ಮಾಡೋ ಪದ್ಧತಿ ಬಂದಿದ್ದು ಹೇಗೆ?: ಶತಮಾನದ ಹಿಂದೆ ಹೇಗಿತ್ತು ದಸರಾ ವೈಭವ?

ಆಯುಧಗಳಿಗೂ ಪೂಜೆ ಮಾಡೋ ಪದ್ಧತಿ ಬಂದಿದ್ದು ಹೇಗೆ?: ಶತಮಾನದ ಹಿಂದೆ ಹೇಗಿತ್ತು ದಸರಾ ವೈಭವ?

Published : Oct 02, 2025, 03:46 PM IST

ಜಗತ್ಪ್ರಸಿದ್ಧ ದಸರಾ ಹಬ್ಬದಲ್ಲಿ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ದೇವತೆಗಳ ಆರಾಧನೆಯ ಸಮಯದಲ್ಲಿ ಆಯುಧಗಳನ್ನು ಏಕೆ ಪೂಜಿಸಲಾಗುತ್ತದೆ ಮತ್ತು ಆ ಆಯುಧಗಳೇ ದೈವಸ್ವರೂಪ ಎನ್ನುವುದರ ಹಿಂದಿರುವ ದೈವಾಯುಧ ರಹಸ್ಯದ ಬಗ್ಗೆ ಇಲ್ಲಿದೆ ಡಿಟೇಲ್‌.

ನಮಸ್ಕಾರ ವೀಕ್ಷಕರೇ.. ಕರುನಾಡಿನ ಹೆಮ್ಮೆಯ ಸಂಭ್ರಮದ ಆಚರಣೆ ದಸರಾ.. ಈ ಜಗತ್ಪ್ರಸಿದ್ಧ ದಸರಾದ ಹಿಂದೆ ನಮಗೆ ಗೊತ್ತಿಲ್ಲದ ಅದೆಷ್ಟೋ ವಿಚಾರಗಳು ಅಡಕವಾಗಿವೆ.. ಅವೆಲ್ಲವುಗಳನ್ನು ಒಂದಾದಾಗಿ ಹುಡುಕುತ್ತಾ ಸಾಗೋಣ.. ಅದರಲ್ಲೂ ಮುಖ್ಯವಾಗಿ, ನವರಾತ್ರಿಯ ಹೊತ್ತಲ್ಲಿ ಭವ್ಯವಾಗಿ ನಡೆಯೋ ಆಯುಧ ಪೂಜೆ ಹಿಂದಿರೋ ಮಹತ್ವ ಎಂಥದ್ದು? ಅದನ್ನೂ ನೋಡೋಣ.. ಆ ದೈವಾಯುಧ ರಹಸ್ಯ ಏನು ಅಂತ ತಿಳಿಯೋಣ..

ಆಶ್ವಿಜ ಶುದ್ಧ ಪಾಡ್ಯದಿಂದ ಆರಂಭವಾಗೋ ಈ ನಾಡ ಹಬ್ಬ ದಸರಾ, ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತೆ. ಈ ಉತ್ಸವವನ್ನು ಕಣ್ತುಂಬಿಕೊಳ್ಳೋಕೆ ದೇಶ ವಿದೇಶಗಳಿಂದಲೂ ಜನ ಆಗಮಿಸ್ತಾರೆ. ಈ ಹಬ್ಬ ತನ್ನ ಆಚರಣಾ ವಿಧಾನದಿಂದಲೇ ಬೇರೆ ಉತ್ಸವಗಳಿಗಿಂತ ವಿಭಿನ್ನವಾಗಿ ಕಾಣುತ್ತೆ. ಅದರಲ್ಲೂ ವಿಶಿಷ್ಟ ಅನ್ನಿಸಿಕೊಳ್ಳೋ ಆಚರಣೆ ಅಂದ್ರೆ, ಆಯುಧಗಳಿಗಂತಲೇ ನಡೆಯೋ, ವಿಶೇಷ ಪೂಜೆ..  ಅಷ್ಟಕ್ಕೂ ನಾಡದೇವಿಯ ಆರಾಧನೆ ಹೊತ್ತಲ್ಲಿ, ಆಯುಧಗಳ ಆರಾಧನೆ ಯಾಕೆ ನಡೆಯುತ್ತೆ? ಏನಿದರ ಸ್ಪೆಷಾಲಿಟಿ?.

ಆ ರೋಚಕ ಕತೆ ಏನು ಅಂತ ಅರ್ಥ ಆಗ್ಬೇಕು ಅಂದ್ರೆ, ನಾವು ಕನಿಷ್ಟ 5 ಶತಮಾನಗಳ ಹಿಂದೆ ಏನಾಗಿತ್ತು ಅಂತ ತಿಳ್ಕೋಬೇಕು. ಆಯುಧ ಪೂಜೆ ಅಂದ್ರೆ, ಅದು ನಮ್ಮ ಹತ್ರ ಇರೋ ಶಸ್ತ್ರಾಸ್ತ್ರಗಳ ಪ್ರದರ್ಶನ ಅಲ್ಲ.. ಆ ಪ್ರದರ್ಶನ ಹಿಂದೆ ಒಂದು ಅದ್ಭುತ ರಹಸ್ಯವೇ ಅಡಗಿದೆ..

ನಾವೇ ಬೇರೆ ನಮ್ಮ ಆಯುಧಗಳೇ ಬೇರೆ ಅನ್ನೋ ಕಲ್ಪನೆಯೇ ಇರ್ಲಿಲ್ಲ.. ಚಕ್ರ ಅಂದ್ರೆ ವಿಷ್ಣು, ತ್ರಿಶೂಲ ಅಂದ್ರೆ ಶಿವ ಅನ್ನೋ ಹಾಗೇ, ಆ ಆಯುಧಗಳೇ ದೈವಗಳ ನಿಜ ಸ್ವರೂಪವಾಗಿದಾವೆ.. ಅಷ್ಟಕ್ಕೂ ದೇವತೆಗಳಿಗೂ ಆಯುಧ ಯಾಕೆ ಬೇಕು? ಇದೆಲ್ಲದರ ಡಿಟೇಲ್ ಈ ವೀಡಿಯೋದಲ್ಲಿದೆ ವೀಕ್ಷಿಸಿ..

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more