ಈಶ್ವರಪ್ಪ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್‌ ನಿಯೋಗ ದೂರು: ಸರ್ಕಾರದ ವಿರುದ್ಧ ಗುಡುಗಿದ ಸಿದ್ದು

Apr 13, 2022, 12:41 PM IST

ಬೆಂಗಳೂರು(ಏ.12): ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್‌ ನಿಯೋಗ ರಾಜ್ಯಪಾಲರನ್ನ ಭೇಟಿ ಮಾಡಿ ಅವರಿಗೆ ಮನವಿಯೊಂದನ್ನ ಸಲ್ಲಿಸಿದ್ದೇವೆ. ಮೃತ ಸಂತೋಷ್‌ ಪಾಟೀಲ್‌ ಒಬ್ಬ ಗುತ್ತಿದಾರರು ಹಾಗೂ ಬಿಜೆಪಿ ಕಾರ್ಯಕರ್ತರಾಗಿದ್ದರು. ಈಶ್ವರಪ್ಪನವರು ಸಂತೋಷ್‌ಗೆ ಹಳ್ಳಿ ರಸ್ತೆಗಳನ್ನ ಮಾಡಲು ಸೂಚಿಸಿದ್ದರು. ಸುಮಾರು 4 ಕೋಟಿ ರೂ. ಮೊತ್ತದ ಕಾಮಗಾರಿಯನ್ನ ಮಾಡಲು ಸಂತೋಷ್‌ಗೆ ಹೇಳಿದ್ದರು. ಸಚಿವರು ಹೇಳಿದ್ದಾರೆ ಅಂತ ಸಂತೋಷ್‌ ಕೂಡ ಕೆಲಸ ಮಾಡಿದ್ದರು. ಆದರೆ ಕೆಲಸ ಮಾಡಿದ ಮೇಲೆ ವರ್ಕ್‌ ಆರ್ಡರ್‌ ಹಾಗೂ ಬಿಲ್‌ ಪಾವತಿ ಮಾಡೋದಕ್ಕೆ ಸಚಿವ ಈಶ್ವರಪ್ಪನವರು 40 ಪರ್ಸೆಂಟ್‌ ಕಮಿಷನ್‌ ಬೇಕು ಅಂತ ಡಿಮ್ಯಾಂಡ್‌ ಮಾಡಿದ್ದರು ಅಂತ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

ಸಂತೋಷ್ ಆತ್ಮಹತ್ಯೆ ಕೇಸ್: ಈಶ್ವರಪ್ಪ ರಾಜೀನಾಮೆ ಇಂದು ಬಹುತೇಕ ಖಚಿತ