ಕಾಂಗ್ರೆಸ್ (Congress) ಭ್ರಷ್ಟಾಚಾರದ (Corruption)ಕಡತ ತೆಗೆಯುವೆ ಎಂದ ಸಿಎಂ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಏ. 18): ಕಾಂಗ್ರೆಸ್ (Congress) ಭ್ರಷ್ಟಾಚಾರದ (Corruption)ಕಡತ ತೆಗೆಯುವೆ ಎಂದ ಸಿಎಂ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ.
ಕಮಿಷನ್ (Commission) ವಿಚಾರದಲ್ಲಿ ಈಶ್ವರಪ್ಪ ಹೆಸರು ಬಂದ ನಂತರದಲ್ಲಿ ಕಪಾಟಿನಲ್ಲಿ ಕಾಂಗ್ರೆಸ್‌ನ ಕಡತಗಳಿವೆ ಎಂದು ಹೇಳುವ ಬಿಜೆಪಿಗರು ಈಗ ಅಧಿಕಾರದಲ್ಲಿದ್ದಾರೆ. ಈ ಹಿಂದೆ ವಿರೋಧ ಪಕ್ಷದಲ್ಲಿದ್ದರು, ಆಗ ಏನು ಕಡ್ಲೇಪುರಿ ತಿಂತಿದ್ರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಗುತ್ತಿಗೆ ವಿಚಾರದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಕೂಡ ಕಮಿಷನ್ ವ್ಯವಹಾರ ನಡೆದಿದೆ. ಅದಕ್ಕೆ ಸಂಬಂಧಪಟ್ಟಕಡತಗಳು ಇವೆ ಎಂದು ಈಗ ಹೇಳುತ್ತಿದ್ದೀರಲ್ಲಾ. ಈವರೆಗೆ ಇವರೆಲ್ಲಾ ಏನು ಮಾಡುತ್ತಿದ್ದರು? ನಾವೇನಾದರೂ ಹಾಗೆ ಕಮಿಷನ್ ವ್ಯವಹಾರ ಮಾಡಿದ್ದರೆ ಇದೀಗ ಕೇಂದ್ರ ಸರ್ಕಾರದವರೆಗೆ ದೂರು ನೀಡಿರುವ ಗುತ್ತಿಗೆದಾರರು ಆಗ ಏಕೆ ದೂರು ನೀಡಲಿಲ್ಲ ಎಂದು ಪ್ರಶ್ನಿಸಿದರು.
ಬಹಳ ಶುದ್ಧಹಸ್ತರು, ಪವಿತ್ರ ಹಸ್ತದವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಇದೀಗ ಯಾತ್ರೆ ಹೊರಟಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಯಾತ್ರೆ ಹೊರಟಿರುವ ಕಾಂಗ್ರೆಸ್ಸಿಗರ ಬೀರುಗಳಲ್ಲಿ ಭ್ರಷ್ಟಾಚಾರದ ಅಸ್ಥಿಪಂಜರಗಳು ಎಷ್ಟಿವೆ ಎಂದು ಮೊದಲು ಲೆಕ್ಕ ಹಾಕಿಕೊಳ್ಳಲಿ. ಇದ್ಯಾವುದರಿಂದಲೂ ಪ್ರಯೋಜನವಾಗುವುದಿಲ್ಲ ಎಂಬುದು ಜನರಿಗೆ ಗೊತ್ತಿದೆ. ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷವನ್ನು ಬಹಳ ವರ್ಷಗಳಿಂದ ನೋಡಿದ್ದಾರೆ. ಯಾವ ಯಾವ ಹಗರಣಗಳಾಗಿವೆ ಎಂಬುದೂ ಅವರಿಗೆ ತಿಳಿದಿದೆ. ನಾವೂ ಜನರ ಮುಂದೆ ಅವರು ಮಾಡಿರುವ ಹಗರಣಗಳನ್ನು ಇಡಬೇಕಾದ ಕಾಲ ಬರುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೊಸಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಹೇಳಿದ್ದರು.