ಹಾನಗಲ್, ಸಿಂದಗಿಯಲ್ಲಿ ಉಪಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಮೂರೂ ಪಕ್ಷದವರು ಒಬ್ಬರ ಮೇಲೊಬ್ಬರು ಕೆಸರೆರಾಟ ಮಾಡುತ್ತಿದ್ದಾರೆ. ಇಂದು ಸಿದ್ದರಾಮಯ್ಯ ಹಾನಗಲ್‌ನಲ್ಲಿ ಪ್ರಚಾರ ನಡೆಸಿದ್ದಾರೆ. ಸಿಎಂ ಬೊಮ್ಮಾಯಿಗೆ ಸವಾಲು ಹಾಕಿದ್ಧಾರೆ.
ಬೆಂಗಳೂರು (ಅ. 22): ಹಾನಗಲ್, ಸಿಂದಗಿಯಲ್ಲಿ ಉಪಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಮೂರೂ ಪಕ್ಷದವರು ಒಬ್ಬರ ಮೇಲೊಬ್ಬರು ಕೆಸರೆರಾಟ ಮಾಡುತ್ತಿದ್ದಾರೆ. ಇಂದು ಸಿದ್ದರಾಮಯ್ಯ ಹಾನಗಲ್‌ನಲ್ಲಿ ಪ್ರಚಾರ ನಡೆಸಿದ್ದಾರೆ. ಸಿಎಂ ಬೊಮ್ಮಾಯಿಗೆ ಸವಾಲು ಹಾಕಿದ್ಧಾರೆ.
'ನಮ್ಮ ಅವದಿಯಲ್ಲಿ ಮಾಡಿದ ರಸ್ತೆಗಳು ಬಿಟ್ರೆ ಒಂದೇ ಒಂದು ಹೊಸ ರಸ್ತೆ ತೋರಿಸಿ ನೋಡೋಣ..? ನಾನು ಸಿಎಂ ಆಗಿದ್ದಾಗ ಬಡವರಿಗೆ ಪ್ರತಿವರ್ಷ 3 ಲಕ್ಷ ಮನೆ ಹಂಚಿಕೆ ಮಾಡಿದ್ದೆವು. ಹಾನಗಲ್‌ಗೆ ನಿಮ್ಮ ಕಾಲದಲ್ಲಿ ಒಂದೂ ಮನೆಯನ್ನು ಮಂಜೂರು ಮಾಡಿಲ್ಲ. 3 ವರ್ಷದಲ್ಲಿ ಒಂದೇ ಒಂದು ಮನೆ ಮಂಜೂರು ಮಾಡಿದ ದಾಖಲೆ ಇದ್ರೆ ನಾನು ರಾಜಕೀಯದಲ್ಲಿ ಇರಲ್ಲ. ಉತ್ತರ ಕೊಡಿ ಬೊಮ್ಮಾಯಿಯವರೇ' ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ಧಾರೆ.