ಭದ್ರಾವತಿಯಲ್ಲಿ ರೌಡಿಗಳ ಮಚ್ಚಿನ ಆರ್ಭಟ: ದೇವಾಲಯದಲ್ಲಿ ಮಚ್ಚಿಗೆ ಪೂಜೆ ಮಾಡಿಸಿ ಕೊಲೆಗೆ ಸ್ಕೆಚ್!

ಭದ್ರಾವತಿಯಲ್ಲಿ ರೌಡಿಗಳ ಮಚ್ಚಿನ ಆರ್ಭಟ: ದೇವಾಲಯದಲ್ಲಿ ಮಚ್ಚಿಗೆ ಪೂಜೆ ಮಾಡಿಸಿ ಕೊಲೆಗೆ ಸ್ಕೆಚ್!

Published : May 05, 2025, 10:21 PM IST

ಭದ್ರಾವತಿಯಲ್ಲಿ ರೌಡಿಗಳ ಗ್ಯಾಂಗ್ ವಾರ್ ತೀವ್ರಗೊಂಡಿದ್ದು, ಚೌಡೇಶ್ವರಿ ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಸಲ್ಲಿಸಿರುವುದು ಬೆಚ್ಚಿ ಬೀಳಿಸಿದೆ. ಗಾಂಧಿ ಮತ್ತು ಮುದ್ದೆ ನಡುವಿನ ದ್ವೇಷ ಹೆಚ್ಚಿದ್ದು, ಪ್ರತಿಕಾರದ ಸ್ಕೆಚ್‌ಗಳು ನಡೆಯುತ್ತಿವೆ.

ಭದ್ರಾವತಿ (ಮೇ 5): ಉಕ್ಕಿನ ನಗರಿ ಎಂದೇ ಹೆಸರಾಗಿರುವ ಭದ್ರಾವತಿಯಲ್ಲೀಗ ರೌಡಿಗಳ ಗ್ಯಾಂಗ್ ವಾರ್ ಖುಲ್ಲಾ ಪ್ರಕಾರಕ್ಕೆ ತಿರುಗಿದೆ. ಕಾನೂನು ಮತ್ತು ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ, ನಡು ರಸ್ತೆಯಲ್ಲಿ ಮಚ್ಚು ಬೀಸುವ ದೃಶ್ಯಗಳು ಅಲ್ಲಿನ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿವೆ.

ಇತ್ತೀಚಿಗೆ ನಡೆದ ಬೆಳವಣಿಗೆಯು ಎಲ್ಲರಿಗೂ ಬೆಚ್ಚಿ ಬೀಳಿಸುವಂತಹದ್ದು. ಭದ್ರಾವತಿಯ ಚೌಡೇಶ್ವರಿ ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ನೆರವೇರಿದ ಘಟನೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಈ ಘಟನೆ 'ಮರ್ಡರ್ ಸ್ಕೆಚ್' ಗೆ ಪೂಜೆಯಂತೆ ಕಾಣುತ್ತಿದೆ.

ಗಾಂಧಿ ಆಲಿಯಾಸ್ ಪ್ರಮೋದ್ ವಿರುದ್ದ ಮುದ್ದೆ ಆಲಿಯಾಸ್ ವಿಶ್ವ: ಗ್ಯಾಂಗ್ ವಾರ್ ಆರಂಭ..?
ಪ್ರಚಲಿತ ಗ್ಯಾಂಗ್ ವರದಿಗಳ ಪ್ರಕಾರ, ಗಾಂಧಿ ಮತ್ತು ಮುದ್ದೆ ನಡುವಿನ ದ್ವೇಷ ತೀವ್ರವಾಗಿದ್ದು, ಪ್ರತೀ ಘಟನೆಯ ಹಿಂದೆ ಪ್ರತಿಕಾರದ ಚಿಹ್ನೆಗಳಿವೆ. ಕೆಲವು ದಿನಗಳ ಹಿಂದೆ ಭದ್ರಾವತಿಯ ಕಂಚಿಬಾಗಿಲು ಬಳಿ ನಡು ರಸ್ತೆಯಲ್ಲೇ ಮಚ್ಚು ಹಿಡಿದ ಗ್ಯಾಂಗ್‌ನಿಂದ ಮುದ್ದೆ ಮೇಲೆ ದಾಳಿ ನಡೆದಿದೆ. ಅವರು ಕೂದಲೊಂದು ಬಿಚ್ಚಿ ಪ್ರಾಣ ಉಳಿಸಿಕೊಂಡು ಓಡಿದ್ದಾರೆ ಎಂಬ ವರದಿಯಿದೆ. ಇದೀಗ ತನ್ನ ಮೇಲಿನ ದಾಳಿಗೆ ಪ್ರತಿಕಾರ ತೀರಿಸಲು ಮುದ್ದೆ ಸ್ಕೆಚ್ ಹಾಕಿರುವ ಶಂಕೆ ವ್ಯಕ್ತವಾಗಿದೆ. ಅದಕ್ಕೆ ಸಾಕ್ಷಿಯಾಗಿ ಚೌಡೇಶ್ವರಿ ದೇವಾಲಯದಲ್ಲಿ ಮಚ್ಚಿಗೆ ಪೂಜೆ ನಡೆಯುವ ದೃಶ್ಯ ಸಿಸಿಟಿವಿಯಲ್ಲಿ ಕಂಡುಬಂದಿದೆ.

ಪೊಲೀಸರು ಎಚ್ಚರವಾಗದಿದ್ದರೆ ಮಾರಕ ಪರಿಣಾಮ :ಭದ್ರಾವತಿಯಲ್ಲಿನ ಸಾರ್ವಜನಿಕರು ಗಂಭೀರ ಆತಂಕದಲ್ಲಿದ್ದಾರೆ. ದಿನದ ಬೆಳಗ್ಗೆ, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ಮಾರಕ ಸ್ಕೆಚ್ ಗಳ ನಿರ್ವಹಣೆಯಲ್ಲಿ ಪೊಲೀಸ್ ಇಲಾಖೆ ಮೌನ ವಹಿಸುತ್ತಿದ್ದರೆ, ಅದು ಮುಂದಿನ ಹಂತದಲ್ಲಿ ದಾಳಿಗಳಾಗಬಹುದು ಎಂಬ ಭೀತಿ ವ್ಯಕ್ತವಾಗಿದೆ.  ಸ್ಥಳೀಯ ರಾಜಕಾರಣಿಗಳು ಈ ಪ್ರಕರಣಗಳಲ್ಲಿ ನಿಷ್ಕ್ರಿಯರಾಗಿದ್ದರೆ ಅಥವಾ ರೌಡಿಗಳಿಗೆ ನೇರ ಅಥವಾ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂಬ ಅನುಮಾನ ಮೂಡಿದೆ. ಇದರಿಂದ ಇಡೀ ನಗರದಲ್ಲಿಯೇ ಭದ್ರತೆಯ ಬಿಕ್ಕಟ್ಟು ಉಂಟಾಗುವುದು ಖಚಿತ.

ಸಿಎಂ ಮತ್ತು ಗೃಹ ಸಚಿವರ ಗಮನಹರಿಸಿ: 

ಈ ಗಂಭೀರ ಪರಿಸ್ಥಿತಿಯತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಕ್ಷಣ ಗಮನ ಹರಿಸಬೇಕು. ಭದ್ರಾವತಿಯಂತಹ ಪ್ರಮುಖ ನಗರದಲ್ಲಿ ಮಚ್ಚಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಹೊಂಚು ಹಾಕಿ ಪ್ರತಿಕಾರದ ಆಟ ನಡೆಯುವುದನ್ನು ತಡೆಗಟ್ಟಬೇಕಿದೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more