2 ಬಾರಿ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿ ನಿಪ್ಪಾಣಿಗೆ ಅಗಮಿಸಿದ ಶಶಿಕಲಾ ಜೊಲ್ಲೆಯವರಿಗೆ ಪಕ್ಷದ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಬೆಂಗಳೂರು (ಆ. 07): 2 ಬಾರಿ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿ ನಿಪ್ಪಾಣಿಗೆ ಅಗಮಿಸಿದ ಶಶಿಕಲಾ ಜೊಲ್ಲೆಯವರಿಗೆ ಪಕ್ಷದ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಜೊಲ್ಲೆ, ಪಕ್ಷದ ವರಿಷ್ಠರು ನನಗೆ ಖಾತೆ ನೀಡಿದ್ದಾರೆ. ನಾನು ಉತ್ತಮವಾಗಿ ಕೆಲಸ ಮಾಡುತ್ತೇನೆ. ಕೊರೋನಾ 3 ನೇ ಅಲೆ ತಡೆಲು ಕಟ್ಟುನಿಟ್ಟಿನ ಕ್ರಮ, ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳುವುದಾಗಿ ಹೇಳಿದ್ಧಾರೆ.
ತಮ್ಮ ವಿರುದ್ಧ ಕೇಳಿ ಬಂದ ಅರೋಪಕ್ಕೆ ಪ್ರತಿಕ್ರಿಯಿಸಿ, ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ನಾನು ಯಾವ ತಪ್ಪನ್ನೂ ಮಾಡಿಲ್ಲ. ತನಿಖೆಗೂ ಸಿದ್ಧ' ಎಂದಿದ್ದಾರೆ.