ಕಾಳಜಿ ಕೇಂದ್ರಗಳಲ್ಲಿ ಇನ್ಮುಂದೆ ರೊಟ್ಟಿ, ಚಹಾ...!

Oct 19, 2020, 6:08 PM IST

ಬೆಂಗಳೂರು (ಅ. 19): ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಜನರು ಕಾಳಜಿ ಕೇಂದ್ರಗಳಲ್ಲಿ ತಂಗಿದ್ದಾರೆ. ಕಾಳಜಿ ಕೇಂದ್ರಗಳಲ್ಲಿ ಇನ್ಮುಂದೆ ರೊಟ್ಟಿ, ಮೊಟ್ಟೆ, ಬಾಳೆಹಣ್ಣು, ಮೊಸರು, ಚಹಾ ಕೊಡಬೇಕು ಅಂತ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಕಲ್ಬುರ್ಗಿಯಲ್ಲಿ 150 ಗ್ರಾಮಗಳು ಮುಳುಗಡೆ; 23 ಸಾವಿರಕ್ಕೂ ಹೆಚ್ಚು ಜನರು ಕಾಳಜಿ ಕೇಂದ್ರಕ್ಕೆ

ಬೆಳಗಾವಿಯಲ್ಲಿ 6 ಸಾವಿರ ಮನೆಗಳು ಬಿದ್ದಿವೆ. ಪರಿಹಾರಕ್ಕಾಗಿ ಜಿಲ್ಲಾಡಳಿತದ ಬಳಿ 88 ಕೋಟಿ ರೂಗಳಿವೆ. ಹಾನಿ ಪರಿಹಾರಕ್ಕಾಗಿಯೇ 5 ಸಾವಿರ ಕೋಟಿ ಬೇಕಾಗುತ್ತದೆ. NDRF ಮೊತ್ತವನ್ನು ಹೆಚ್ಚಿಸಲು ಕೇಂದ್ರ ಹಣಕಾಸು ಇಲಾಖೆ ಒಪ್ಪಿಗೆ ಕೊಟ್ಟಿದೆ.