Oct 31, 2021, 11:10 AM IST
ಭೆಂಗಳೂರು (ಅ.31) : ಹೃದಯಾಘಾತದಿಂದ ನಿಧನರಾದ ಕರುನಾಡ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ಇಂದು ಮುಕ್ತಾಯ ಹಿನ್ನೆಲೆ ಮಂಗಳವಾರ ಕುಟುಂಬಸ್ಥರಿಗೆ ಮಾತ್ರ ಹಾಲು ತುಪ್ಪಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಯಾವುದೇ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿಲ್ಲ.
ಅಪ್ಪು ಅಂತ್ಯಕ್ರಿಯೆ ಮುಕ್ತಾಯ : ಮೂರು ದಿನ ಸಾರ್ವಜನಿಕರಿಗಿಲ್ಲ ಪ್ರವೇಶ
ಕಂಠೀರವ ಸ್ಟುಡಿಯೋ ಸುತ್ತಮುತ್ತ ನಿಷೇದಾಜ್ಞೆ ಜಾರಿಗೊಳಿಸಲಾಗುತ್ತಿದ್ದು, ಇನ್ನು ಮೂರು ದಿನ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. 144 ಸೆಕ್ಷನ್ ಜಾರಿ ಮಾಡಲು ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಸ್ಟುಡಿಯೋ ಸುತ್ತಮುತ್ತ ಸಾರ್ವಜನಿಕವಾಗಿ ಗುಂಪು ಸೇರುವಂತಿಲ್ಲ. ಮೂರು ದಿನ ಬಳಿಕವಷ್ಟೇ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದ್ದಾರೆ.