ನಾವು ಇವತ್ತಲ್ಲ ನಾಳೆ ಸಾಯಲೇಬೇಕು, ಹೀಗಾಗಿ ಸಂಘರ್ಷಕ್ಕೆ ತಯಾರಾಗಿ : ಅಬ್ದುಲ್ ಮಜೀದ್ ಮೈಸೂರು

Feb 10, 2024, 12:36 PM IST

ಮಂಗಳೂರು: ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅನುಮತಿ ನೀಡಿರುವುದನ್ನು ಖಂಡಿಸಿ ಮಂಗಳೂರಿನಲ್ಲಿ(Mangalore) SDPI ಪ್ರತಿಭಟನೆ ನಡೆಸಿದೆ. ಈ ವೇಳೆ ಮಾತನಾಡಿದ, SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು(Abdul Majeed Mysore) ಸಂಘರ್ಷಕ್ಕೆ ಬಹಿರಂಗ ಕರೆ ನೀಡಿದ್ದಾರೆ. ಸಂಘರ್ಷಕ್ಕೆ ಮತ್ತು ಹುತಾತ್ಮರಾಗಲು ತಯರಾಗಿ ಎಂದಿದ್ದಾರೆ. ಜ್ಞಾನವಾಪಿ ವಿಷಯದಲ್ಲಿ(Gyanvapi Masjid) ಹೈಕೋರ್ಟ್‌ನಲ್ಲಿ ಪ್ರಕರಣ ನಡೀತಾ ಇದೆ. ಆದರೂ ತರಾತುರಿಯಲ್ಲಿ ಕೆಳಗಿನ ಕೋರ್ಟ್‌ನ ಜಡ್ಜ್ ಪೂಜೆಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಪೂಜಾ ಸ್ಥಳ ಕಾಯಿದೆಯಡಿ ಯಥಾಸ್ಥಿತಿ ಆದೇಶ ಇದೆ. ಆದರೆ ಆ ಕಾನೂನಿನ ಮೂರು ಕಾಸಿನ ಬೆಲೆ ಕೊಡ್ತಾ ಇಲ್ಲ. ಸಂಘರ್ಷ, ತ್ಯಾಗ, ಬಲಿದಾನ ಮಾಡದೇ ನಮ್ಮ ಸಮಸ್ಯೆಗೆ ಪರಿಹಾರ ಇಲ್ಲ. ಈ ದೇಶದಲ್ಲಿ ಕಾನೂನು ಇದ್ಯಾ? ಕಾನೂನು ಸತ್ತು ಹೋಗಿದೆ. ಯಾವ ಬೆಲೆ ತೆತ್ತಾದರೂ ಮಸೀದಿ, ಮಂದಿರ, ಚರ್ಚ್‌ಗಳನ್ನು ಉಳಿಸಿಕೊಳ್ಳಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದ್ದಿದ್ದನ್ನ ಅಲ್ಲೇ ಉಳಿಸಿಕೊಳ್ಳಬೇಕು. ಸಿದ್ದರಾಮಯ್ಯ, ರಾಹುಲ್, ಸೋನಿಯಾ, ಖರ್ಗೆ ಉಳಿಸ್ತಾರೆ ಅಂತ ಕಾಯಬೇಡಿ. ಜೈಲಿಗೆ ಹೋಗಲು, ಕೇಸುಗಳನ್ನ ಹಾಕಿಸಿಕೊಳ್ಳಲು, ಹುತಾತ್ಮರಾಗಲು ತಯಾರಾಗಿ ಎಂದು ಅಬ್ದುಲ್ ಮಜೀದ್ ಮೈಸೂರು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಸ್ಟಾರ್‌ವಾರ್‌ನಿಂದ ದೂರ ಉಳಿದ ಸುದೀಪ್..! ಪೈಪೋಟಿಗೆ ಬಿದ್ದು ಸಿನಿಮಾ ಅಪ್‌ಡೇಟ್ ಕೊಡಲ್ಲ ಎಂದ ಕಿಚ್ಚ..!