May 7, 2020, 1:23 PM IST
ಬೆಂಗಳೂರು(ಮೇ.07): ಕೊರೋನಾ ವಾರಿಯರ್ಸ್‌ಗಳಾದ ವೈದ್ಯರು ಹಾಗೂ ನರ್ಸ್‌ಗಳಿಗೆ SARI ಪ್ರಕರಣಗಳು ತಲೆನೋವಾಗಿ ಪರಿಣಮಿಸುತ್ತಿವೆ. ತೀವ್ರ ಉಸಿರಾಟದ ತೊಂದರೆಯಿರುವವರಿಗೆ ಕೊರೋನಾ ವೈರಸ್ ದೃಢವಾಗುತ್ತಿದೆ.
ತೀವ್ರ ಉಸಿರಾಟದ ತೊಂದರೆ ಇರುವಂತವರಿಂದಲೇ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಇದು ಆರೋಗ್ಯ ಇಲಾಖೆಗೆ ಹೊಸ ಸವಾಲಾಗಿ ಪರಿಣಮಿಸಿದೆ. SARI ಎಂದರೆ ಕೊರೋನಾದಿಂದ ತೀವ್ರ ಉಸಿರಾಟದ ತೊಂದರೆ ಇರುವವರು ಎಂದರ್ಥ. ಇನ್ನು ILE ಅಂದರೆ ಶೀತ, ಜ್ವರ ರೀತಿಯ ಸೋಂಕು ಹೊಂದಿರುವವರು ಎಂದರು.
ಇಂದಿನಿಂದ ಕಾರವಾರದಲ್ಲಿ ಕಡಲಿಗಿಳಿಯುತ್ತೆ ಮೀನು ಬೇಟೆ ಬೋಟುಗಳು..!
SARI ಮತ್ತು ILE ಅವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಕೇವಕ 29 SARI ಕೇಸ್‌ಗಳಿಂದ 281 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.