Apr 12, 2022, 7:43 PM IST
ಬೆಂಗಳೂರು (ಏ.11): ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ( KS Eshwarappa) ತಮ್ಮ ರಾಜೀನಾಮೆ (resignation ) ನೀಡುವವರೆಗೂ ನನ್ನ ಸಹೋದರನ ಮೃತದೇಹವನ್ನು ತೆಗೆಯೋದಿಲ್ಲ ಎಂದು ಗುತ್ತಿಗೆದಾರ ಸಂತೋಷ್ (contractor santosh Patil) ಅವರ ಸಹೋದರ ಪ್ರಶಾಂತ್ ಪಾಟೀಲ್ (Prashanth Patil)ಹೇಳಿದ್ದಾರೆ. ನನ್ನ ತಮ್ಮನ ಸಾವಿಗೆ ಈಶ್ವರಪ್ಪ ಅವರ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ನನ್ನ ತಮ್ಮ ಮಾಡಿದ ಕೆಲಸಕ್ಕೆ ಒಂದು ರೂಪಾಯಿ ಹಣ ಬಂದಿಲ್ಲ. ಸಂತೋಷ್ ನಿಯತ್ತಿನ ಮನುಷ್ಯ ಅವರ ಮೇಲೆ ಸುಳ್ಳು ಕೇಸ್ ಗಳನ್ನು ಹಾಕಲಾಯಿತು. ಈಶ್ವರಪ್ಪ ಶೇ. 40ರಷ್ಟು ಕಮೀಷನ್ ಕೇಳಿದ್ರು, ಮಾನನಷ್ಟ ಮೊಕದ್ದೆಮೆ ಹಾಕಿದ್ದರು. ಜೊತೆಗೆ ಬೆದರಿಕೆ ಕೂಡ ಹಾಕಿದ್ದರು. ಈ ಕಾರಣದಿಂದಾಗಿಯೇ ಆತ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದರು. ಎಂದು ಸಂತೋಷ್ ಪಾಟೀಲ್ ಅವರ ಸಹೋದರ ಹೇಳಿದ್ದಾರೆ.
ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಹೆಸರು: ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಕಾಂಗ್ರೆಸ್
ನನ್ನ ತಮ್ಮನ ಸಾವಿಗೆ ಈಶ್ವರಪ್ಪನೇ ಕಾರಣ, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡೋವರೆಗೆ, ಸಂತೋಷ್ ಮೃತ ದೇಹವನ್ನು ಎತ್ತಲ್ಲ' ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.