May 28, 2020, 4:11 PM IST
ಬೆಂಗಳೂರು (ಮೇ. 28): ನಾಲ್ಕನೇ ಹಂತದ ಲಾಕ್‌ಡೌನ್ ಮೇ. 31 ಕ್ಕೆ ಮುಕ್ತಾಯಗೊಳ್ಳಲಿದೆ. ಜೂನ್ 1 ರಿಂದ ಹೊಸ ಮಾರ್ಗಸೂಚಿ ಬರಲಿದೆ. ದೇಗುಲಗಳನ್ನು ತೆರೆಯಲು ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಸೇರಿ ಹಲವು ದೇವಾಲಯಗಳಲ್ಲ ಸ್ವಚ್ಛತಾ ಕೆಲಸ ಆರಂಭವಾಗಿದೆ. ಸ್ಯಾನಿಟೈಸರ್ ಸಿಂಪಡಿಸಿ ದೇವಾಲಯ ಸ್ವಚ್ಛತಾ ಕೆಲಸ ಶುರು ಮಾಡಲಾಗಿದೆ.