Jan 6, 2023, 6:46 PM IST
ಬ್ರಾಹ್ಮಣ ಮಹಾಸಭಾದಿಂದ ರಾಜ್ಯವ್ಯಾಪಿ ಹೋರಾಟ ಮಾಡಲು ನಿರ್ಧರಿಸಲಾಗಿದ್ದು, ಸರ್ಕಾರದ ನೀತಿ ಅಸಮಾಧಾನ ತಂದಿದೆ ಎಂದು ಆರೋಪ ಮಾಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿಗೆ ಸಮುದಾಯದ ವಿರೋಧ ತಿಳಿಸಲು ನಿರ್ಣಯ ಮಾಡಲಾಗಿದೆ. ಮೋದಿ ಭೇಟಿ ಮಾಡಿ ಸರ್ಕಾರದ ನಿಲುವಿನ ಕುರಿತು ದೂರು ಸಲ್ಲಿಕೆಗೆ ನಿರ್ಧರಿಸಿದ್ದು, ಮೀಸಲಾತಿ ಇರುವವರಿಗೆ EWS ಮೀಸಲಾತಿ ವರ್ಗಾಯಿಸಬಾರದು ಎಂದು ಸರ್ಕಾರದ ವಿರುದ್ಧ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲೂ ಹೋರಾಟ ನಡೆಸಲು ನಿರ್ಧರಿಸಲಾಗಿದೆ.