Republic Day 2022: ಕೋವಿಡ್ ನಿಯಮಗಳೊಂದಿಗೆ ಸರಳ ಗಣರಾಜ್ಯೋತ್ಸವ

Jan 26, 2022, 1:42 PM IST

ಬೆಂಗಳೂರು (ಜ. 26): ದೇಶಾದ್ಯಂತ 73 ನೇ ಗಣರಾಜ್ಯೋತ್ಸವ (Republic Day 2022)  ದಿನದ ಸಂಭ್ರಮ. ಮಾಣೆಕ್ ಶಾ ಮೈದಾನದಲ್ಲಿ ಸರಳವಾಗಿ, ಕೋವಿಡ್ 19 ನಿಯಮಗಳೊಂಡಿಗೆ ಕಾರ್ಯಕ್ರಮ ನೆರವೇರಿತು. ಕೋವಿಡ್ ಹಿನ್ನಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲ. 

ಕೆಎಸ್‌ಆರ್‌ಪಿ, ಸಿಆರ್‌ಪಿಎಫ್‌, ಬಿಎಸ್‌ಎಫ್‌, ಸಿಎಆರ್‌, ಕೆಎಸ್‌ಐಎಸ್‌ಎಫ್‌, ಸಂಚಾರಿ ಪೊಲೀಸರು, ಮಹಿಳಾ ಪೊಲೀಸರು, ಗೃಹ ರಕ್ಷಕ ದಳ, ಟ್ರಾಫಿಕ್‌ ವಾರ್ಡನ್‌, ಅಗ್ನಿಶಾಮಕ ದಳದ ಸಿಬ್ಬಂದಿ, ಶ್ವಾನ ದಳ ಮತ್ತು ಬ್ಯಾಂಡ್‌ನ ಒಟ್ಟು 21 ತುಕಡಿಗಳಲ್ಲಿ ಸುಮಾರು 500 ಮಂದಿ ಕವಾಯತ್ತಿನಲ್ಲಿ ಭಾಗವಹಿಸಿದವು. 

'ಕೊರೋನಾ ಮಹಾಮಾರಿ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತಿದ್ದೇವೆ. ಜನರ ಸಹಕಾರದಿಂದ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನಲೆ ಹಲವಾರು ಯೋಜನೆಗೆ ಪ್ಲ್ಯಾನ್ ಮಾಡಲಾಗಿದೆ. ಸಣ್ಣ ನೀರಾವರಿಯಲ್ಲಿ ಬದಲಾವಣೆ ತರಲು 1400 ಕೋಟಿ ನೀಡಿದ್ದೇವೆ. ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ' ಎಂದು ರಾಜ್ಯಪಾಲ ಗೆಹ್ಲೋಟ್ ಜನತೆಯನ್ನುದ್ದೇಶಿಸಿ ಮಾತನಾಡಿದರು.