ಹಂಪ್ಸ್‌ಗಳು ಮಾಯ, ಪ್ರಧಾನಿ ಮೋದಿ ಬಂದು ಹೋದ ರಸ್ತೆ ಈಗ ಆಕ್ಸಿಡೆಂಟ್‌ ಝೋನ್!

Jul 2, 2022, 8:51 AM IST

ಬೆಂಗಳೂರು (ಜು. ೦೨): ಬಿಬಿಎಂಪಿ ಮಾಡಿದ ಎಡವಟ್ಟಿಗೆ ಪ್ರತಿದಿನ ಅಪಘಾತ (Accident) ಸಂಭವಿಸುತ್ತಿದೆ. ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಾಗ ಸಂಚರಿಸಿದ ರಸ್ತೆಗಳಲ್ಲಿ ಹಂಪ್ಸ್ ತೆಗೆದು ಹಾಕಲಾಗಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿದೆ. ಬೆಂಗಳೂರು ವಿವಿ ರಸ್ತೆಯಲ್ಲಿ ಪ್ರತಿದಿನ ಅಪಘಾತವಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯೂನಿವರ್ಸಿಟಿ ಅಭಿಯಂತರರು, ಬಿಬಿಎಂಪಿಗೆ ಪತ್ರ ಬರೆಯಲಾಗಿದೆ. ಆದರೆ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ. 

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ವಕ್ಫ್ ಬೋರ್ಡ್‌ಗೆ ಬಿಬಿಎಂಪಿ ಮತ್ತೊಮ್ಮೆ ನೋಟಿಸ್!