ನಮ್ಮ ಸೋದರರ ಪ್ರಗತಿಗೆ ಮುಖ್ಯಮಂತ್ರಿಗಳು ಕಾರಣರಾಗಿದ್ದಾರೆ. ಲೋಕಸಭಾ ಚುನಾವಣೆ ವೇಳೆ ನಮಗೆ ಕೊಟ್ಟಿರುವ ಮಾತನ್ನು ಈಡೇರಿಸುವಂತೆ ಕೇಳಿದ್ದೇವೆ. ಮಾತು ತಪ್ಪಿದರೆ ಮುಂದಿನ ನಮ್ಮ ರಾಜಕೀಯ ನಿರ್ಧಾರವನ್ನು ಜನರು ತೀರ್ಮಾನಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಮೇ. 29): ನಮ್ಮ ಸೋದರರ ಶ್ರೇಯೋಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರಣ. ಒಂದು ವೇಳೆ ನನ್ನನ್ನು ರಾಜ್ಯಸಭೆಗೆ ಆಯ್ಕೆ ಮಾಡದಿದ್ದರೆ ನಮ್ಮ ಮುಂದಿನ ನಡೆಯನ್ನು ರಾಜ್ಯದ ಜನ ನಿರ್ಧರಿಸುತ್ತಾರೆ ಎಂದು ಆಡಳಿತಾರೂಢ ಬಿಜೆಪಿಯ ಮಾಜಿ ಸಂಸದ ರಮೇಶ್ ಕತ್ತಿ ಗುಡುಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನಮಗೆ ಕೊಟ್ಟಮಾತನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಉಮೇಶ್ ಕತ್ತಿ ನೆನಪು ಮಾಡಿದ್ದಾರೆ. ನಮ್ಮನ್ನು ಪಕ್ಷ ಬೆಳಸಿದೆ. ನಮಗೆ ಅನ್ಯಾಯವಾದಾಗ ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳನ್ನು ನೇರವಾಗಿ ಪ್ರಶ್ನಿಸುತ್ತೇವೆ. ನನಗೆ ರಾಜ್ಯಸಭಾ ಟಿಕೆಟ್ ನೀಡುವಂತೆ ನನ್ನ ಪರವಾಗಿ ಮುಖ್ಯಮಂತ್ರಿ ಸೋದರ ಮನವಿ ಮಾಡಿದ್ದಾರೆ ಎಂದು ಹೇಳಿದರು.