Mar 8, 2021, 11:16 AM IST
ಬೆಂಗಳೂರು (ಮಾ. 08): ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿ, ರಮೇಶ್ ಜಾರಕಿಹೊಳಿ ರಾಜಿನಾಮೆಗೆ ಕಾರಣವಾಗಿದ್ದ ಸಿ.ಡಿ. ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮಾಜಿ ಸಚಿವರ ವಿರುದ್ಧ ನೀಡಿದ್ದ ದೂರು ಹಿಂಪಡೆಯಲು ಪೊಲೀಸರಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಪತ್ರ ಬರೆದಿದ್ದಾರೆ.
ಸಾಹುಕಾರ್ ರಾಸಲೀಲೆ ಕೇಸ್ : ಸಿಂಗಲ್ ಬೆಡ್ ರೂಂ, ಸೀಡಿ ಲೇಡಿಗಾಗಿ ತಲಾಶ್..!
'ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಐದು ಕೋಟಿ ರು. ಡೀಲ್ ನಡೆದಿದೆ ಎಂದು ನನ್ನ ಮೇಲೆ ಗುರುತರ ಆರೋಪ ಮಾಡಿದ್ದಾರೆ. ಅವರ ಈ ಹೇಳಿಕೆಯಿಂದ ಜನ ನನ್ನನ್ನು ಸಂಶಯದಿಂದ ನೋಡುವಂತಾಗಿದೆ. ಮಾಹಿತಿ ಕೊಡುವವರನ್ನು ಟಾರ್ಗೆಟ್ ಮಾಡುತ್ತಿರುವುದು ನೋವಿನ ಸಂಗತಿ. ಇದರಿಂದ ಮಾನಸಿಕವಾಗಿ ನೊಂದು ದೂರು ವಾಪಸ್ ಪಡೆಯಲು ನಿರ್ಧರಿಸಿದ್ದೇನೆ' ಎಂದಿದ್ಧಾರೆ.