76ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ನಗರದ ಯಲಹಂಕ ಬಿಬಿಎಂಪಿ ವಿಭಾಗದ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸಸಿ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬೆಂಗಳೂರು (ಆ.13): 76ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ನಗರದ ಯಲಹಂಕ ಬಿಬಿಎಂಪಿ ವಿಭಾಗದ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸಸಿ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಂಗಳೂರಿನ ವಿವಿಧ ನಗರಗಳಲ್ಲಿ 76 ಬಗೆಯ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ರಾಜೀವ್ ಚಂದ್ರಶೇಖರ್, ಮೋದಿಯವರ ಕನಸು ದೇಶದ ಅಭಿವೃದ್ಧಿಯಾಗಬೇಕು 2024ರಲ್ಲಿ 3ನೇ ಅತಿದೊಡ್ಡ ಅಭಿವೃದ್ಧಿ ದೇಶ ಆಗಬೇಕು ಎಂದು ಹೇಳಿದರು.