Sep 10, 2020, 1:34 PM IST
ಬೆಂಗಳೂರು (ಸೆ. 10): ಸಿಲಿಕಾನ್ ಸಿಟಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಆರ್ ಆರ್ ನಗರದ ಪ್ರಮೋದ್ ಲೇಔಟ್ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿರುವ ವಸ್ತುಗಳು ನೀರಲ್ಲಿ ತೇಲಿ ರಸ್ತೆಗೆ ಬಂದಿವೆ.
ದಾವಣಗೆರೆ: ಭಾರೀ ಮಳೆಗೆ ತತ್ತರ, ಜನಜೀವನ ಅಸ್ತವ್ಯಸ್ತ
ಇನ್ನೊಂದು ಕಡೆ ರಾಜಕಾಲುವೆ ಗೋಡೆ ಕುಸಿದಿದೆ. ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುತ್ತಿದ್ದಾರೆ. ನೀರಿನ ಜೊತೆ ಕಸದ ರಾಶಿಯೂ ತೇಲಿಕೊಂಡು ಬರುತ್ತಿದೆ. ಇದು ಇನ್ನೂ ತೊಂದರೆಯನ್ನುಂಟು ಮಾಡುತ್ತಿದೆ. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಬಗ್ಗೆ ಬಿಬಿಎಂಪಿ ಇನ್ನೂ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.