Karnataka Rain ಮತ್ತೆ ಮೂರು ದಿನ ಭಾರೀ ಮಳೆ : ಕಂಗಾಲಾಯ್ತು ಕರುನಾಡು

Nov 20, 2021, 10:24 AM IST

ಬೆಂಗಳೂರು (ನ.20):  ಕರುನಾಡಿಗೆ ಬಿಟ್ಟು ಬಿಡದೆ ವರುಣ (Rain) ಕಾಡುತ್ತಿದ್ದಾನೆ. ಎಲ್ಲೆಡೆ ರಣಭೀಕರ ಮಳೆ ಅಬ್ಬರಿಸುತ್ತಿದೆ. ಎಲ್ಲೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನೂ ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. 

Uttara Kannada| ಅಕಾಲಿಕ ಮಳೆಗೆ ನೀರುಪಾಲಾದ ಬೆಳೆ, ಕಂಗಾಲಾದ ಅನ್ನದಾತ..!

ರೈತ ವರ್ಗ (Farmers) ಭಾರಿ ಮಳೆಯಿಂದ ಕಂಗಾಲಾಗಿದೆ. ಬೆಳೆದ (Crops) ಬೆಳೆಗಳು ಕೈಗೆ ಸಿಗದೇ ಹೊಲದಲ್ಲಿಯೇ ಮೊಳಕೆಯೊಡೆಯುತ್ತಿವೆ.  ಕೈಗೆ ಬಂದ ತುತ್ತು ಬಾಯಿಗೆ ಬಾರದೆ ವರ್ಷದ ಅನ್ನವನ್ನೇ ಕಳೆದುಕೊಂಡು ಅನ್ನದಾತ ಕಣ್ಣೀರು ಮಳೆಯ ನೀರಿನೊಂದಿಗೆ ಹರಿಯುತ್ತಿದೆ.  ದಿನದಿನವೂ ಮಳೆ ಹೆಚ್ಚಾಗುತ್ತಲೇ ಇದ್ದು ಆತಂಕವೂ ಅಧಿಕವಾಗಿದೆ.  ಇನ್ನೂ ಮಳೆ ನಿಲ್ಲುವ ಲಕ್ಷಣ ಮಾತ್ರ ಕಂಡು ಬರುತ್ತಿಲ್ಲ. ಭತ್ತ, ರಾಗಿ ಜೋಳ, ತೊಗರಿ, ಅಡಕೆ ಬೆಳೆಗಳು ಮಳೆಯಲ್ಲಿ ಸಿಕ್ಕಿ ಹಾಳಾಗುತ್ತಿವೆ. ಜಮೀನಿಗೆ ನೀರು ನುಗ್ಗಿ ಸಾವಿರಾರು ಎಕರೆಯಲ್ಲಿ ಬೆಳೆದ ಪೈರು  ನೀರು ಪಾಲಾಗಿದೆ.