Oct 19, 2021, 3:29 PM IST
ಬೆಂಗಳೂರು (ಅ. 19): ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್, ಡ್ರಗ್ ಪೆಡ್ಲರ್' ಎಂದು ವರದಿಯಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳೂರು ಖ್ಯಾತ ವಕೀಲ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ಸಂತ್ರಸ್ತೆ ಜೊತೆಗಿನ ಆಡಿಯೋ ವೈರಲ್
ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಪಕ್ಷವನ್ನೇ ಸಂಭಾಳಿಸಲು ಸಾಧ್ಯವಾಗುತ್ತಿಲ್ಲ. ಪಕ್ಷವನ್ನೇ ಕಟ್ಟಲು ಒದ್ದಾಡುತ್ತಿದ್ದಾರೆ. ಇವರಿಬ್ಬರು ದೇಶವನ್ನು ಹೇಗೆ ಮುನ್ನೆಡುಸುತ್ತಾರೆ.? ಇಂಥವರು ನಮ್ಮ ಪ್ರಧಾನಿಯನ್ನು ಟೀಕಿಸುತ್ತಾರೆ. ಸನ್ಮಾನ್ಯ ಮೋದಿಯವರು ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಹಳ ಎತ್ತರಕ್ಕೆ ಕೊಂಡೊಯ್ದಿದ್ದಾರೆ' ಎಂದು ಕಟೀಲ್ ಹೇಳಿದ್ದಾರೆ.