'ಪುನೀತ್ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಒಬ್ಬರ ಹಿಂದೆ ಒಬ್ಬರು ಹೋದ್ರೆ ಭೂಮಿಯಲ್ಲಿ ಯಾರೂ ಇರುವುದಿಲ್ಲ. ನಮ್ಮ ನೋವನ್ನ ನಿಮ್ಮ ತಂದೆ ತಾಯಿಗೆ ಕೊಡಬೇಡಿ: ರಾಘವೇಂದ್ರ ರಾಜ್‌ಕುಮಾರ್
ಬೆಂಗಳೂರು (ನ. 04): 'ಪುನೀತ್ (Puneeth Rajkumar) ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಒಬ್ಬರ ಹಿಂದೆ ಒಬ್ಬರು ಹೋದ್ರೆ ಭೂಮಿಯಲ್ಲಿ ಯಾರೂ ಇರುವುದಿಲ್ಲ. ನಮ್ಮ ನೋವನ್ನ ನಿಮ್ಮ ತಂದೆ ತಾಯಿಗೆ ಕೊಡಬೇಡಿ. ಪುನೀತ್‌ಗೆ ಈ ರೀತಿ ಅಗೌರವ ತೋರಿಸಬೇಡಿ. ಅವರು ದೇಹ ಬಿಟ್ಟು ಹೋಗಿದ್ದಾರೆ. ಅವರ ಕೆಲಸಗಳು, ಚಿತ್ರಗಳು ಎಲ್ಲವನ್ನೂ ಬಿಟ್ಟು ಹೋಗಿದ್ದಾರೆ. ಅದನ್ನು ನಾವು ಪಾಲಿಸೋಣ. ನಾವು ಬಹಳಷ್ಟು ದುಃಖದಲ್ಲಿದ್ದೇವೆ, ನಮ್ಮ ದುಃಖವನ್ನು ಇನ್ನಷ್ಟು ಹೆಚ್ಚಿಸಬೇಡಿ, ಅಪ್ಪು ಇನ್ನಿಲ್ಲ ಎಂದು ನಾವೆಲ್ಲಾ ನೋವಿನಲ್ಲಿದ್ದೇವೆ. ಇದನ್ನು ನುಂಗಿಕೊಂಡು ಮುಂದೆ ಸಾಗೋಣ' ಎಂದು ರಾಘವೇಂದ್ರ ರಾಜ್‌ಕುಮಾರ್ ಮನವಿ ಮಾಡಿಕೊಂಡಿದ್ದಾರೆ.