ನಗರಸಭೆಯಿಂದ ಸಾರ್ವಜನಿಕ ಶೌಚಾಲಯ ಸ್ವಚ್ಛತೆ: Big 3ಗೆ ಬೀದರ್‌ ಜನರ ಅಭಿನಂದನೆ

Aug 26, 2022, 3:05 PM IST

ಬೀದರ್‌ (ಆ.26): ಗಡಿ ಜಿಲ್ಲೆ ಬೀದರ್‌ನಲ್ಲಿ ಸರ್ಕಾರದಿಂದ ಕಟ್ಟಿಸಿದ್ದ ಶೌಚಾಲಯಗಳು ನಿರ್ವಹಣೆ ಇಲ್ಲದೇ ಪಾಳು ಬಿದ್ದ ಬಗ್ಗೆ ಬಿಗ್‌ 3 ತಂಡ ವರದಿ ಮಾಡಿತ್ತು. ಈ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತಿದ್ದು, ಸಾರ್ವಜನಿಕ ಶೌಚಾಲಯ ಸ್ವಚ್ಛತೆ ಆರಂಭವಾಗಿದೆ. ಹೌದು! ಬೀದರ್‌ನಲ್ಲಿ ಶೌಚಾಲಯಗಳು ನಿರ್ವಹಣೆ ಇಲ್ಲದೇ ಪಾಳು ಬಿದಿದ್ದು, ಇದರಿಂದಾಗಿ ಜನಸಾಮಾನ್ಯರು ಬೀದಿಯಲ್ಲೇ ಮಲ-ಮೂತ್ರ ವಿಸರ್ಜನೆ ಮಾಡೋ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಡೀ ಬೀದರ್ ನಗರದ ತುಂಬೆಲ್ಲಾ ಗಲೀಜು ತುಂಬಿ ಗಬ್ಬೆದ್ದು ಹೋಗಿತ್ತು. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್‌ 3ಯಲ್ಲಿ ವರದಿಯನ್ನು ಪ್ರಸಾರ ಮಾಡಿ, ಸಂಬಂಧಪಟ್ಟವರ ಗಮನಕ್ಕೂ ತಂದಿತ್ತು. ಈ ವರದಿ ಪ್ರಸಾರದ ಬೆನಲ್ಲೇ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು, ತಕ್ಷಣವೇ ಜಟ್ಟಿಂಗ್ ಯಂತ್ರದಿಂದ ಶೌಚಾಲಯವನ್ನು ಸ್ಚಚ್ಛಗೊಳಿಸುವ ಕೆಲಸವನ್ನು ಮಾಡಿದರು. ಇನ್ನು ಈ ವರದಿಯನ್ನು ಪ್ರಸಾರ ಮಾಡಿ ಸಮಸ್ಯೆಯನ್ನು ಬಗೆಹರಿಸಿದ Big 3ಗೆ ಬೀದರ್‌ ಜನರು ಅಭಿನಂದಿಸಿದ್ದಾರೆ.