ವೀಕೆಂಡ್ ಕರ್ಫ್ಯೂ (Weekend Curfew) ಮುಂದುವರೆಸಬೇಕಾ.? ತೆರವುಗೊಳಿಸಬೇಕಾ ಎಂಬ ಯೋಚನೆಯಲ್ಲಿದೆ ಸರ್ಕಾರ. ಶುಕ್ರವಾರ ಜ. 21 ರಂದು ಸಿಎಂ ಮಹತ್ವದ ಸಭೆ ನಡೆಸಲಿದ್ದಾರೆ. ತಜ್ಞರ ಅಭಿಪ್ರಾಯದಂತೆ ವೀಕೆಂಡ್ ಕರ್ಫ್ಯೂ ನಿರ್ಧಾರವಾಗಲಿದೆ ಎಂದು ಸಿಎಂ ಹೇಳಿದ್ಧಾರೆ.
ಬೆಂಗಳೂರು (ಜ. 19): ವೀಕೆಂಡ್ ಕರ್ಫ್ಯೂ (Weekend Curfew) ಮುಂದುವರೆಸಬೇಕಾ.? ತೆರವುಗೊಳಿಸಬೇಕಾ ಎಂಬ ಯೋಚನೆಯಲ್ಲಿದೆ ಸರ್ಕಾರ. ಶುಕ್ರವಾರ ಜ. 21 ರಂದು ಸಿಎಂ (CM Bommai) ಮಹತ್ವದ ಸಭೆ ನಡೆಸಲಿದ್ದಾರೆ. ತಜ್ಞರ ಅಭಿಪ್ರಾಯದಂತೆ ವೀಕೆಂಡ್ ಕರ್ಫ್ಯೂ ನಿರ್ಧಾರವಾಗಲಿದೆ. ನಿಯಮಗಳ ಸಡಿಲಿಕೆ ಬಗ್ಗೆ ತಜ್ಞರು ಪರಾಮರ್ಶೆ ಮಾಡುತ್ತಿದ್ದಾರೆ. ಶುಕ್ರವಾರದ ಸಭೆಯಲ್ಲಿ ನಿರ್ಧಾರವಾಗಲಿದೆ. ಜನರ ಜೀವ ಉಳಿಸುವುದು ನಮ್ಮ ಕರ್ತವ್ಯ. ಜನರಿಗೂ ತೊಂದರೆಯಾಗದಂತೆ, ಸೋಂಕು ಹೆಚ್ಚಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಸರ್ಕಾರದ ಮುಂದಿರುವ ಆಯ್ಕೆಗಳೇನು ಎಂದು ನೋಡುವುದಾದರೆ, ಒತ್ತಡಕ್ಕೆ ಮಣಿದು ವೀಕೆಂಡ್ ಕರ್ಫ್ಯೂ ರದ್ದು ಮಾಡಬಹುದು, ಇನ್ನೊಂದು ವಾರದವರೆಗೆ ಕಾದು ನೋಡುವ ತಂತ್ರ, ಹೊಟೇಲ್, ಬಾರ್‌ಗಳಲ್ಲಿ 50:50 ರೂಲ್ಸ್ ಮುಂದುವರೆಕೆ ಮಾಡುವ ಸಾಧ್ಯತೆ