Apr 22, 2022, 11:05 AM IST
ಕಲಬುರಗಿ (ಏ.22): ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಬಗೆದಷ್ಟೂಹೊಸ ತಿರುವು ಪಡೆದುಕೊಳ್ಳುತ್ತಾ ಸಾಗಿದ್ದು, ಈವರೆಗೂ ಬಿಜೆಪಿ ನಾಯಕಿ ಸುತ್ತ ಸುತ್ತುತ್ತಿದ್ದ ಹಗರಣ ಇದೀಗ ಕಾಂಗ್ರೆಸ್ ನಾಯಕರತ್ತವೂ ಹೊರಳಿದೆ. ಅಕ್ರಮಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು ಅಫಜಲ್ಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲರ ಗನ್‌ಮ್ಯಾನ್ ಸೇರಿ ಇಬ್ಬರು ಪೇದೆಗಳನ್ನು ಬಂಧಿಸಿದ್ದಾರೆ.
ಜೆಡಿಎಸ್‌ಗೆ ಶಾಕ್, ಪಕ್ಷಕ್ಕೆ ಗುಡ್‌ಬೈ ಹೇಳ್ತಾರಾ ಶಾಸಕ ಶಿವಲಿಂಗೇಗೌಡ..?
ಕಲಬುರಗಿ ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪೇದೆ ರುದ್ರಗೌಡ ಮತ್ತು ಶಾಸಕರ ಗನ್‌ಮ್ಯಾನ್ ಅಯ್ಯಣ್ಣ ದೇಸಾಯಿ ಬಂಧಿತ ಆರೋಪಿಗಳು. ನೇಮಕ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಹೈಟೆಕ್ ನಕಲು ಮಾಡಿದ ಆರೋಪದ ಮೇರೆಗೆ ಬಂಧಿಸಲಾಗಿದೆ.
'ಗನ್‌ಮ್ಯಾನ್ ಅಯ್ಯಣ್ಣ ದೇಸಾಯಿ ನನ್ನ ಜೊತೆ 3 ವರ್ಷದಿಂದ ಜೊತೆಗಿದ್ದ. ಬಹಳ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ. ಅವನ ಸರ್ವೀಸ್‌ನಲ್ಲಿ ನಮಗೆ ತೊಂದರೆಯಾಗಿಲ್ಲ. ನನಗಾಗಲಿ, ಪಕ್ಷಕ್ಕಾಗಲಿ ಸಂಬಂಧ ಇಲ್ಲ. ಇದರ ಹಿಂದೆ ಬಿಜೆಪಿ ಕುತಂತ್ರ ಇದೆ' ಎಂದು ಕಾಂಗ್ರೆಸ್ ಶಾಸಕ ಎಂ ವೈ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.