Apr 27, 2022, 10:49 AM IST
ಬೆಂಗಳೂರು (ಏ. 27): PSI ನೇಮಕಾತಿ ಅಕ್ರಮ (PSI Recruitment Scam) ಪ್ರಕರಣ ಬಗೆದಷ್ಟೂ ಬಯಲಾಗ್ತಾ ಇದೆ. ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಹೇಗೆಲ್ಲಾ ನಡೆಯುತ್ತಿತ್ತು ಎಂದು ಈಗಾಗಲೇ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿ ಪ್ರಸಾರ ಮಾಡಿದೆ. ಸಿಐಡಿ ಅಧಿಕಾರಿಗಳ ಎದುರು ಸ್ವತಃ ಆರ್ ಡಿ ಪಾಟೀಲ್ ಸತ್ಯ ಬಾಯ್ಬಿಟ್ಟಿದ್ದಾನೆ.
ಹಣ ಕೊಟ್ರೆ ಸಾಕು ಅರ್‌ಡಿ ಪಾಟೀಲ್ ಪರಿಕ್ಷಾ ಕೇಂದ್ರವನ್ನು ಫಿಕ್ಸ್ ಮಾಡುತ್ತಿದ್ದ. ಅಕ್ರಮ ನಡೆಸುವುದಕ್ಕೆ ಬೃಹತ್ ಜಾಲವನ್ನೇ ಸಿದ್ದಪಡಿಸಿಕೊಂಡಿದ್ದ. ಪರೀಕ್ಷಾ ಕೇಂದ್ರದ ಹೊರಗೆ ಕುಳಿತು, ಬ್ಲೈಟೂತ್ ಮೂಲಕ ಅಭ್ಯರ್ಥಿಗಳಿಗೆ ಉತ್ತರ ಹೇಳಿಕೊಡಲಾಗುತ್ತಿತ್ತು.