Jan 27, 2021, 5:07 PM IST
ಬೆಂಗಳೂರು (ಜ. 27): ಮರಾಠಿ ಅಸ್ಮಿತೆ ಮರಾಠಿಗರ ತಾಕತ್ತು ಎಂದು ತೋರಿಸುವ ಕಾಲ ಬಂದಿದೆ. ಕನ್ನಡಿಗರ ದೌರ್ಜನ್ಯವನ್ನು ನಾವು ಸಹಿಸಲ್ಲ. ದೌರ್ಜನ್ಯ ಮಾಡಿದರೆ ನಾವು ಪ್ರತಿಭಟಿಸ್ತೀವಿ. ಬೆಳಗಾವಿಯಲ್ಲಿದ್ದದ್ದು ಕನ್ನಡಿಗರ ತಾಕತ್ತಲ್ಲ, ಮರಾಠಿಗರ ತಾಕತ್ತು' ಎಂದು ಉದ್ಧವ್ ಠಾಕ್ರೆ ನಾಲಿಗೆ ಹರಿ ಬಿಟ್ಟಿದ್ದಾರೆ.
ಮರಾಠಿ ಆಸ್ಮೆತೆ ಎಂದು ನಾಲಿಗೆ ಹರಿಬಿಟ್ಟ ಠಾಕ್ರೆ, ಇವೆಲ್ಲಾ ಚೆನ್ನಾಗಿರಲ್ಲ ಎಂದು ಎಚ್ಚರಿಸಿದ ಕರವೇ
'ರಾಜಕೀಯವಾಗಿ ಸಂಪೂರ್ಣ ಬಿದ್ದು ಹೋಗಿದ್ದಾರೆ. ಮುಂದೆ ಅವರಿಗೆ ಭವಿಷ್ಯವಿಲ್ಲ. ಕನ್ನಡಿಗರ ತಾಕತ್ತೇನು ಎಂದು ಮರಾಠಿಗರಿಗೆ ತೋರಿಸಲು ರೆಡಿ ಇದ್ದೇವೆ. ಸಿಎಂ ಆಗಿರೋಕೆ ನಾಲಾಯಕ್ ಅವರು. ಏನೇ ಮಾತಾಡಿದರೂ ಒಂದಿಂಚು ಭೂಮಿಯನ್ನೂ ಪಡೆಯಲು ಸಾಧ್ಯವಿಲ್ಲ. ಬೆಳಗಾವಿ ಯಾವತ್ತೂ ಕರ್ನಾಟಕದ್ದೇ. ಬೆಳಗಾವಿಯಲ್ಲಿ ಎಂಇಎಸ್‌ನ್ನು ಸಂಪೂರ್ಣವಾಗಿ ನಿಷೇಧಿಸಬೇಕು' ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.