ಶೇ. 64 ರಷ್ಟು ಹಳ್ಳಿಗಳಿಗೆ ಕೊರೋನಾ ಸೋಂಕು, ಈ 2 ಜಿಲ್ಲೆಗಳಲ್ಲೇ ಹೆಚ್ಚು ಸೋಂಕು

Jun 2, 2021, 2:03 PM IST

ಬೆಂಗಳೂರು (ಜೂ. 02): ರಾಜ್ಯದಲ್ಲಿ ಸೋಂಕು ಇಳಿಕೆಯಾಗುತ್ತಿರುವುದು ಸಮಾಧಾನ ತಂದಿದ್ದರೂ, ಆಘಾತಕಾರಿ ವಿಚಾರವೊಂದು ಹೊರಬಂದಿದೆ.  ಕರ್ನಾಟಕದಲ್ಲಿ ಶೇ. 64 ರಷ್ಟು ಹಳ್ಳಿಗಳಲ್ಲಿ ಕೊರೋನಾ ವೈರಸ್ ಹಬ್ಬಿದೆ.

ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 12.3 ಕ್ಕೆ ಇಳಿಕೆ

ಗ್ರಾಮೀಣ ಅಭಿವೃದ್ಧಿ ಇಲಾಖೆ ನಡೆಸಿದ ಸರ್ವೆಯಲ್ಲಿ ಇದು ಬೆಳಕಿಗೆ ಬಂದಿದೆ. 18, 528 ಹಳ್ಳಿಗಳಲ್ಲಿ ಕೊರೋನಾ ಸೋಂಕು ಹರಡಿದೆ. ಉಡುಪಿ, ದಕ್ಷಿಣ ಕನ್ನಡದ ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗಿ ಕಂಡು ಬಂದಿದೆ.