ಪ್ರವೀಣ್ ಮೃತದೇಹದ ಮೆರವಣಿಗೆ: SDPI, PFI ಧ್ವಜಗಳ ತೆರವು, ಅಂತಿಮ ದರ್ಶನಕ್ಕೆ ವ್ಯವಸ್ಥೆ

Jul 27, 2022, 1:38 PM IST

ಬಿಜೆಪಿ ಕಾರ್ಯಕರ್ತ ಪ್ರವೀಣ್ ಮೃತದೇಹ ಮೆರವಣಿಗೆಗಾಗಿ ರಸ್ತೆ ಬದಿ ಇದ್ದ ಕ್ಯಾಂಪಸ್ ಫ್ರಂಟ್ ಆಫ್ ಧ್ವಜಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಈ ಹೇಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದುವರೆಗೂ ಸ್ಥಳಕ್ಕೆ ಯಾವೊಬ್ಬ ರಾಜಕಾರಣಿಯೂ ಬರದೇ ಇರುವುದಕ್ಕೆ ಸಾರ್ವಜನಿಕ ಟೀಕೆಗೆ ಒಳಗಾಗಿದೆ. 

ಪ್ರವೀಣ್ ಹತ್ಯೆ: ಎನ್‌ಐಎ ತನಿಖೆಗೆ ಹಿಂದೂ ಮುಖಂಡರಿಂದ ಆಗ್ರಹ

'ಮತಾಂಧರ ಕ್ರೌರ್ಯಕ್ಕೆ ಬಲಿಯಾದ ಬಿಜೆಪಿಯ ಯುವನಾಯಕ ಪ್ರವೀಣ್ ನೆಟ್ಟಾರ್ ಬರ್ಬರ ಹತ್ಯೆಯಿಂದ ಆಘಾತಗೊಂಡಿದ್ದೇನೆ. ಸರಕಾರ ಹಾಗೂ ಸಮಾಜ ಪ್ರವೀಣ್ ಕುಟುಂಬದ ಜತೆಗಿದೆ. ಹಿಂದುಗಳ ಒಗ್ಗಟ್ಟು ಒಡೆಯುವುದಕ್ಕೆ‌ ಮತಾಂಧ ಶಕ್ತಿಗಳು ನಡೆಸುತ್ತಿರುವ ಇಂಥ ಹೇಯ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ' ಎಂದು ಇಂಧನ ಸಚಿವ ಸುನೀಲ್ ಕುಮಾರ್ ಟ್ವಿಟ್ ಮಾಡಿದ್ದಾರೆ. 

'ಇದು ಪೂರ್ವನಿಯೋಜಿತ ಕೃತ್ಯ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಇದರ ಹಿಂದೆ ಯಾರಿದ್ದಾರೆ ಎಂದು ತನಿಖೆ ಆಗ್ಬೇಕು, ಅವರಿಗೆ ಶಿಕ್ಷೆಯಾಗ್ಬೇಕು' ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.