Aug 18, 2021, 5:30 PM IST
ಬೆಂಗಳೂರು (ಆ. 18): ನಿಗದಿತ ಸಮಯಕ್ಕಿಂತ ಮೊದಲೇ ಬೆಂಗಳೂರು ಮತ್ತು ಮೈಸೂರು ನಡುವೆ ದಶಪಥ ಹೆದ್ದಾರಿ ನಿರ್ಮಾಣವಾಗುತ್ತಿದೆ. ಈ ದಶಪಥ ಹೆದ್ದಾರಿ ಬಗ್ಗೆ ಸಂಸದೆ ಸುಮಲತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಅನುಮಾನ ಇದ್ದವರನ್ನು ತಜ್ಞರನ್ನು ಕರೆತಂದು ಪರಿಶೀಲಿಸಲಿ. ಆ ರಸ್ತೆಯ ಕ್ವಾಲಿಟಿ ಚೆಕ್ ಮಾಡಿ. ಸುಮಲತಾ ಸಂಸದೆಯಾಗುವ ಮೊದಲೇ ಮೋದಿಯವರು ಈ ಯೋಜನೆಯನ್ನು ಘೋಷಿಸಿದ್ದರು. ಇದು ಮೈಸೂರಿಗೆ ತಂದ ಯೋಜನೆ. ಇದು ಮಂಡ್ಯ/ರಾಮನಗರಕ್ಕೆ ತಂದ ಯೋಜನೆಯಲ್ಲ' ಎಂದು ಸಂಸದ ಪ್ರತಾಪ್ ಸಿಂಹ ಟಾಂಗ್ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯನ್ನು ನಿಮಗೆ ಬರೆದು ಕೊಟ್ಟಿದ್ದಾರಾ? ಸುಮಲತಾಗೆ ರವೀಂದ್ರ ಶ್ರೀಕಂಠಯ್ಯ ಸವಾಲ್
ಮೈಸೂರು-ಬೆಂಗಳೂರು ನಡುವಿನ ದಶಪಥಗಳ ಆರ್ಥಿಕ ಕಾರಿಡಾರ್ ಹೆದ್ದಾರಿ ದಾಖಲೆಯ ವೇಗದಲ್ಲಿ ನಿರ್ಮಾಣವಾಗುತ್ತಿದೆ. 8172 ಕೋಟಿ ರು. ವೆಚ್ಚದ ಈ ಕಾಮಗಾರಿ 2022ರ ಅಕ್ಟೋಬರ್‌ಗೆ ಮುಕ್ತಾಯವಾಗಲಿದೆ. ಪ್ರಸ್ತುತ 3 ಗಂಟೆ ಇರುವ ಪ್ರಯಾಣದ ಸಮಯ ಹೆದ್ದಾರಿ ನಿರ್ಮಾಣದಿಂದ 90 ನಿಮಿಷಕ್ಕೆ ಇಳಿಯಲಿದೆ.