ತಿಪ್ಪೆಗೊಂಡನಹಳ್ಳಿ ಕೆರೆ ಪರಿಸರದಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನವು ಲಯನ್ಸ್ ಕ್ಲಬ್, ಎನ್‌ಎಸ್‌ಎಸ್ , ಬಿಬಿಎಂಪಿ ಮತ್ತು ಕೋಟಿ ವೃಕ್ಷ ಸೈನ್ಯದ ಸಹಯೋಗದೊಂದಿಗೆ ಗಿಡ ನೆಡುವ ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿತ್ತು.
ಬೆಂಗಳೂರು (ಸೆ. 21): ತಿಪ್ಪೆಗೊಂಡನಹಳ್ಳಿ ಕೆರೆ ಪರಿಸರದಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನವು ಲಯನ್ಸ್ ಕ್ಲಬ್, ಎನ್‌ಎಸ್‌ಎಸ್ , ಬಿಬಿಎಂಪಿ ಮತ್ತು ಕೋಟಿ ವೃಕ್ಷ ಸೈನ್ಯದ ಸಹಯೋಗದೊಂದಿಗೆ ಗಿಡ ನೆಡುವ ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿತ್ತು.
200ಕ್ಕಿಂತಲೂ ಹೆಚ್ಚು ಸ್ವಯಂ ಸೇವಕರು ಸಾವಿರಕ್ಕಿಂತ ಹೆಚ್ಚು ಗಿಡಗಳನ್ನು ಒಂದೆ ದಿನ ನೆಟ್ಟರು. 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 75 ಸಾವಿರ ಗಿಡಗಳನ್ನು ನೆಡಬೇಕು ಎಂಬ ನಮ್ಮ ಬೆಂಗಳೂರು ಪ್ರತಿಷ್ಠಾನ, ಬಿಬಿಎಂಪಿ ಮತ್ತು ಕೆವಿಎಸ್ ಸಂಸ್ಥೆಯ ಸಂಕಲ್ಪದ ಭಾಗವಾಗಿ ಈ ಅಭಿಯಾನ ನಡೆದಿದೆ.