Jan 1, 2025, 12:16 PM IST
ಬೆಂಗಳೂರು(ಜ.01): 2024ಕ್ಕೆ ಬೈ ಬೈ ಹೇಳಿ 2025ಕ್ಕೆ ವೆಲ್ಕಮ್ ಹೇಳಲಾಗಿದೆ. ಹೀಗಾಗಿ ಎಲ್ಲೆಡೆ ಹೊಸ ವರ್ಷದ ಸಂಭ್ರಮಾಚರಣೆ ಮಾಡಲಾಗಿದೆ. 2025ನ್ನು ಸಂಭ್ರಮದಿಂದ ಜನರು ಸ್ವಾಗತಿಸಿದ್ದಾರೆ. ಕುಣಿದು ಕೊಪ್ಪಳಿಸುವ ಮೂಲಕ ಹೊಸ ವರ್ಷವನ್ನ ಬರಮಾಡಿಕೊಳ್ಳಲಾಗಿದೆ. ನಿನ್ನೆ ರಾತ್ರಿ ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಜನರು ಸಂಭ್ರಮದಿಂದ ಹೊಸ ವರ್ಷವನ್ನ ಬರಮಾಡಿಕೊಂಡಿದ್ದಾರೆ. 12 ಗಂಟೆ ಆಗುತ್ತಿದ್ದಂತೆ ಪಟಾಕಿ ಸಿಡಿಸಿ ಸಂತಸದಿಂದ ಹೊಸ ವರ್ಷಕ್ಕೆ ವೆಲ್ಕಮ್ ಹೇಳಿದ್ದಾರೆ ಜನರು. ರಾಜ್ಯದ ಮೂಲೆ ಮೂಲೆಯಲ್ಲಿ ಹೊಸ ವರ್ಷದ ಸಂಭ್ರಮ ಮನೆ ಮಾಡಿತ್ತು.