ಸಿ ಟಿ ರವಿ-ಡಿಕೆಶಿ (CT Ravi- DK Shivakumar) ನಡುವಿನ ವಾಕ್ಸಮರ ಮುಂದುವರೆದಿದೆ. ಪಟಾಕಿ ರವಿ ಎಂದ ಡಿಕೆಶಿ (DK Shivakumar) ಹೇಳಿಕೆಗೆ ಸಿ ಟಿ ರವಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಡಿ. 21): ಸಿ ಟಿ ರವಿ-ಡಿಕೆಶಿ (CT Ravi- DK Shivakumar) ನಡುವಿನ ವಾಕ್ಸಮರ ಮುಂದುವರೆದಿದೆ. ಪಟಾಕಿ ರವಿ ಎಂದ ಡಿಕೆಶಿ (DK Shivakumar) ಹೇಳಿಕೆಗೆ ಸಿ ಟಿ ರವಿ ತಿರುಗೇಟು ನೀಡಿದ್ದಾರೆ. 'ನಾನು ಕೇಡಿ ರವಿಯಲ್ಲ, ನಾನು ತಿಹಾರ್ ಜೈಲು ರಿಟರ್ನ್ ಅಲ್ಲ, ನನ್ನ ರೆಕಾರ್ಡ್ ಶುದ್ಧವಾಗಿದೆ' ಎಂದು ಸಿ ಟಿ ರವಿ ಟಾಂಗ್ ನೀಡಿದ್ದಾರೆ.
'ಸಿ ಟಿ ರವಿಯಲ್ರೀ ಅವನು, ಪಟಾಕಿ ರವಿ, ಅವನು ಏನೋ ಒಂದು ಪಟಾಕಿ ಹಚ್ಚಿ ಬಿಡೋದು, ಆ ಪಟಾಕಿ ರವಿಗೂ ನನಗೂ ಸಂಬಂಧವೇ ಇಲ್ರೀ' ಎಂದು ಡಿಕೆಶಿ ಹೇಳಿದ್ದರು.