ಜುಲೈನಲ್ಲಿ ಶಾಲೆ ಪುನರಾರಂಭಕ್ಕೆ ಪೋಷಕರ ವಿರೋಧ..!

Jun 3, 2020, 4:38 PM IST

ಬೆಂಗಳೂರು(ಜೂ.03): ಕೊರೋನಾ ಭೀತಿಯ ನಡುವೆಯೇ ಶಾಲೆಗಳ ಪುನಾರಾರಂಭಕ್ಕೆ ಸಿದ್ದತೆ ಶುರುವಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಜುಲೈನಿಂದ ಶಾಲೆ ತೆರೆತಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಶಾಲೆಗಳಲ್ಲಿ ಜೂನ್ 08ನೇ ತಾರೀಕಿನಿಂದ ದಾಖಲಾತಿ ಪ್ರಕ್ರಿಯೆಗಳು ಆರಂಭವಾಗಲಿವೆ. ಜೂನ್ 10 ರಿಂದ 12ರೊಳಗೆ ಪೋಷಕರು SDMC ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲು ಸೂಚಿಸಲಾಗಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಈ ಕುರಿತಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. 

ಮೂರು ಹಂತದಲ್ಲಿ ಶಾಲೆ ಆರಂಭಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಜುಲೈ 01ರಿಂದ 4ರಿಂದ 7ನೇ ತರಗತಿ, ಜುಲೈ 15ರಿಂದ 1ರಿಂದ 3ನೇ ತರಗತಿ ಹಾಗೂ 8ರಿಂದ ಹತ್ತನೇ ತರಗತಿ. ಇನ್ನು ಜುಲೈ 20ರಿಂದ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಸರ್ಕಾರ ಚಿಂತಿಸಿದೆ.

ಕರಾವಳಿ ಜಿಲ್ಲೆಗಳ ಮೇಲೆ ನಿಸರ್ಗ ಚಂಡಮಾರುತದ ಎಫೆಕ್ಟ್‌: ಸಮುದ್ರದಲ್ಲಿ ಮುಳುಗಿದ ಬೋಟ್‌

ಆದರೆ ಸರ್ಕಾರದ ಈ ನಿರ್ಧಾರಕ್ಕೆ ಪೋಷಕರಿಂದ ಈಗಾಗಲೇ ವಿರೋಧಗಳು ವ್ಯಕ್ತವಾಗಿವೆ. ಮಕ್ಕಳ ಆರೋಗ್ಯದ ಕಾಳಜಿಯ ಕುರಿತಂತೆ ಪೋಷಕರು ಸುವರ್ಣ ನ್ಯೂಸ್‌ನಲ್ಲಿ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.